BengaluruCinema

ಕೆಜಿಎಫ್‌ ಹವಾ: ತೂಫಾನ್‌ ಲಿರಿಕಲ್‌ ಹಾಡಿನ ಅಬ್ಬರಕ್ಕೆ ಎಲ್ಲಾ ದಾಖಲೆಗಳು ಉಡೀಸ್

ಬೆಂಗಳೂರು: ರಾಕಿಂಗ್‌ ಸ್ಟಾರ್ ಯಶ್ ಅಭಿನಯದ ಸಿನಿಮಾ ‘ಕೆಜಿಎಫ್2’ಗೆ ಪ್ರೇಕ್ಷಕರು ಯಾವ ರೇಂಜ್‌ನಲ್ಲಿ ಕಾಯುತ್ತಿದ್ದಾರೆ ಎಂಬುದು ಎಲ್ಲರಿಗೂ ಗೊತ್ತು. ಕೆಜಿಎಫ್‌ನ ಮೊದಲ ಭಾಗದ ದೊಡ್ಡ ಯಶಸ್ಸಿನೊಂದಿಗೆ ಕೆಜಿಎಫ್- 2 ಬಿಡುಗಡೆಗೆ ಸಿದ್ಧವಾಗಿದೆ. ಪ್ರಶಾಂತ್ ನೀಲ್ ನಿರ್ದೇಶನದ ಕೆಜಿಎಫ್ ಸಿನಿಮಾ ಪ್ರೇಕ್ಷಕರನ್ನು ರಂಜಿಸುವಲ್ಲಿ ಯಶಸ್ವಿಯಾಗಿರುವ ಕಾರಣ ಈಗ ಸೀಕ್ವೆಲ್ ಚಿತ್ರಕ್ಕಾಗಿ ಪ್ರೇಕ್ಷಕರು ಕಾತುರದಿಂದ ಕಾಯುತ್ತಿದ್ದಾರೆ. ಸಮ್ಮರ್ ಗಿಫ್ಟ್ ಆಗಿ ಸಿನಿಮಾ ರಿಲೀಸ್ ಮಾಡಲು ಚಿತ್ರತಂಡ ರೆಡಿಯಾಗಿದ್ದು ಕೆಜಿಎಫ್2 ಚಿತ್ರತಂಡ ಪ್ರಮೋಷನ್ ಶುರು ಮಾಡಿದೆ. ಇತ್ತೀಚೆಗಷ್ಟೇ ಸಿನಿಮಾದ ‘ತುಫಾನ್’ ಲಿರಿಕಲ್ ವಿಡಿಯೋ ಸಾಂಗ್ ಅನ್ನು ಚಿತ್ರತಂಡ ಬಿಡುಗಡೆ ಮಾಡಿತ್ತು.

ಲಿರಿಕಲ್ ವಿಡಿಯೋ ಸಾಂಗ್ ಲೇಟೆಸ್ಟ್ ಆಗಿದ್ದು, ಹಾಡಿಗೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ. ಈ ಹಾಡು ಬಿಡುಗಡೆಯಾದ 24 ಗಂಟೆಗಳಲ್ಲಿ 5 ಭಾಷೆಗಳಲ್ಲಿ ಅತಿ ಹೆಚ್ಚು ವೀಕ್ಷಿಸಲ್ಪಟ್ಟ ಹಾಡು ಎಂಬ ಹೊಸ ದಾಖಲೆಯನ್ನು ಮಾಡಿದೆ.  ಲಿರಿಕ್ ವೀಡಿಯೊ ಹಾಡು ಎಲ್ಲಾ ಭಾಷೆಗಳಲ್ಲಿ 26 ಮಿಲಿಯನ್ ವೀಕ್ಷಣೆಗಳೊಂದಿಗೆ ಸಾರ್ವಕಾಲಿಕ ದಾಖಲೆಯನ್ನು ಸೃಷ್ಟಿಸಿದೆ. ಲಿರಿಕಲ್ ಸಾಂಗ್ 2 ಮಿಲಿಯನ್ ಪ್ಲಸ್ ಲೈಕ್ಸ್‌ಗಳನ್ನು ಪಡೆದುಕೊಂಡಿದೆ. ಮೊದಲ ಲಿರಿಕಲ್ ಸಾಂಗ್ ಮೂಲಕ ಕೇವಲ 24 ಗಂಟೆಗಳಲ್ಲಿ ಅತಿ ಹೆಚ್ಚು ವೀಕ್ಷಣೆ ಪಡೆದ ಹಾಡು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ, ಚಿತ್ರದ ಮೇಲಿನ ನಿರೀಕ್ಷೆ ಈಗ ದುಪ್ಪಟ್ಟಾಗಿದೆ.

ಯಶ್ ಮಾಸ್ ಲುಕ್ ಚಿತ್ರಕ್ಕೆ ಪ್ರಮುಖ ಪ್ಲಸ್ ಪಾಯಿಂಟ್ ಆಗಿದ್ದರೆ, ನಿರ್ದೇಶಕ ಪ್ರಶಾಂತ್ ನೀಲ್ ಚಿತ್ರದ ನಿರೂಪಣೆ ಮತ್ತೊಂದು ಹೈಲೈಟ್ ಆಗಲಿದೆ. ಯಶ್ ಪವರ್ ಫುಲ್ ಪರ್ಫಾಮೆನ್ಸ್, ಅದ್ಭುತ ಹೀರೋ ಎಲಿವೇಶನ್ಸ್ ಮತ್ತು ಆಕರ್ಷಕ ಸಂಗೀತದಿಂದ ಮತ್ತೊಮ್ಮೆ ಕೆಜಿಎಫ್ 2 ಸಿನಿಮಾ ಪ್ರೇಕ್ಷಕರಿಗೆ ಖಂಡಿತಾ ಇಷ್ಟವಾಗುತ್ತದೆ ಎಂದು ಚಿತ್ರತಂಡ ಹೇಳುತ್ತದೆ. ಚಿತ್ರದಲ್ಲಿ ಯಶ್ ಎದುರು ಬ್ಯೂಟಿ ಕ್ವೀನ್ ಶ್ರೀನಿಧಿ ಶೆಟ್ಟಿ ನಾಯಕಿಯಾಗಿ ನಟಿಸಿದ್ದು, ಬಾಲಿವುಡ್ ನಟ ಸಂಜಯ್ ದತ್ ಖಳನಾಯಕನಾಗಿ ಕಾಣಿಸಿಕೊಂಡಿದ್ದಾರೆ. ಬಾಲಿವುಡ್ ನಟಿ ರವೀನಾ ಟಂಡನ್ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದು, ಹೊಂಬಾಳೆ ಫಿಲಂಸ್ ಬೃಹತ್ ಬಜೆಟ್‌ನಲ್ಲಿ ಚಿತ್ರವನ್ನು ನಿರ್ಮಿಸುತ್ತಿದೆ. ಏಪ್ರಿಲ್ 14 ರಂದು ವಿಶ್ವದಾದ್ಯಂತ ಚಿತ್ರವನ್ನು ಬಿಡುಗಡೆ ಮಾಡಲು ಚಿತ್ರತಂಡ ಸಜ್ಜಾಗಿದೆ.

Share Post