CinemaHealth

ಲೀಲಾವತಿ ಫೋಟೋ ಮುಂದೆ ಕುಳಿತು ಪ್ರೀತಿಯ ನಾಯಿ ಕಣ್ಣೀರು!

ಬೆಂಗಳೂರು; ಹಿರಿಯ ನಟಿ ಲೀಲಾವತಿ ಇಹಲೋಕ ತ್ಯಜಿಸಿದ್ದು, ಇಡೀ ನಾಡೇ ಕಂಬನಿ ಮಿಡಿಯುತ್ತಿದೆ. ಇನ್ನೊಂದೆಡೆ ಲೀಲಾವತಿಯವರ ಪ್ರೀತಿಯ ನಾಯಿ ಕೂಡಾ ಕಣ್ಣೀರು ಹಾಕುತ್ತಿರುವುದು ಮನ ಕಲಕುವಂತಿದೆ. ಸೋಲದೇವನಹಳ್ಳಿಯ ತೋಟದ ಮನೆಯಲ್ಲಿ ನೀರವ ಮೌನ ಆವರಿಸಿದೆ. ಮನೆಯಲ್ಲಿ ಲೀಲಾವತಿಯವರ ಫೋಟೋ ಇಡಲಾಗಿದ್ದು, ಆ ಫೋಟೋ ಮುಂದೆ ಮೌನವಾಗಿ ಕುಳಿತಿರುವ ನಾಯಿ, ಕಣ್ಣೀರು ಸುರಿಸುತ್ತಿದೆ. 

ಈ ನಾಯಿಯ ಹೆಸರು ಕರಿಯ ಆಗಿದ್ದು, ಹಲವಾರು ವರ್ಷಗಳಿಂದ ಲೀಲಾವತಿಯವರು ಈ ನಾಯಿಯನ್ನು ಮುದ್ದಾಗಿ ಸಾಕಿದ್ದಾರೆ. ರಾತ್ರಿಯಿಂದ ಲೀಲಾವತಿಯವರು ಮನೆಯಲ್ಲಿ ಕಾಣದ ಹಿನ್ನೆಲೆಯಲ್ಲಿ ನಾಯಿ ಕಣ್ಣೀರು ಸುರಿಸುತ್ತಿದೆ. ಮೂಕವೇದನೆ ಅನುಭವಿಸುತ್ತಿದೆ. ಎರಡು ಕಾಲುಗಳ ಸ್ವಾಧೀನ ಕಳೆದುಕೊಂಡಿದ್ದರೂ, ತೆವಳಿಕೊಂಡೇ ಮನೆಯ ಒಳಗೆ ಬಂದಿರುವ ನಾಯಿ ಮೌನವಾಗಿ ಕುಳಿತಿದೆ.

 

Share Post