CinemaPolitics

ಪ್ರಿಯಾಂಕಾ ಗಾಂಧಿ ಪಿಎ ಕೆಟ್ಟ ಶಬ್ದಗಳಲ್ಲಿ ನಿಂದಿಸಿದರು; ಹಿಂದಿ ಬಿಗ್‌ಬಾಸ್‌ ಸ್ಪರ್ಧಿ ಅರ್ಚನಾ ದೂರು

ನವದೆಹಲಿ; ಕಾಂಗ್ರೆಸ್‌ನಲ್ಲಿ ಗುರುತಿಸಿಕೊಂಡಿದ್ದ ಬಿಗ್ ಬಾಸ್ ಹಿಂದಿ ಸೀಸನ್ 16ರ ಸ್ಪರ್ಧಿ ಅರ್ಚನಾ ಗೌತಮ್, ಪ್ರಿಯಾಂಕಾ ಗಾಂಧಿ ಪಿಎ ವಿರುದ್ಧ ಗಂಭೀರ ಆರೋಪವೊಂದನ್ನು ಮಾಡಿದ್ದಾರೆ. ಕಾಂಗ್ರೆಸ್‌ ನಾಯಕಿ ಪ್ರಿಯಾಂಕಾ ಗಾಂಧಿ ಅವರ ಪಿಎ ನನ್ನನ್ನು ಕೆಟ್ಟ ಶಬ್ದಗಳಲ್ಲಿ ನಿಂದಿಸಿದ್ದಾರೆ. ಜೊತೆಗೆ ಕೊಲೆ ಬೆದರಿಕೆ ಕೂಡಾ ಹಾಕಿದ್ದಾರೆ ಎಂದು ಮೀರತ್‌ ಪೊಲೀಸ್‌ ಠಾಣೆಯಲ್ಲಿ ಅರ್ಚನಾ ಗೌತಮ್‌ ದೂರು ದಾಖಲಿಸಿದ್ದಾರೆ.

ಅರ್ಚನಾ ಗೌತಮ್ ಪ್ರತಿಷ್ಠಿತ ಮಾಡೆಲ್‌ ಆಗಿದ್ದು, ಮಿಸ್ ಬಿಕಿನಿ ಇಂಡಿಯಾ, ಮಿಸ್ ಉತ್ತರ ಪ್ರದೇಶ ಕಿರೀಟ ತಮ್ಮದಾಗಿಸಿಕೊಂಡಿದ್ದಾರೆ. ಹಲವು ಚಿತ್ರಗಳಲ್ಲೂ ನಟಿಸಿರುವ ಅವರು ಕಾಂಗ್ರೆಸ್‌ನಲ್ಲಿ ತೊಡಗಿಸಿಕೊಂಡು ಉತ್ತರ ಪ್ರದೇಶದಲ್ಲಿ ಚುನಾವಣೆಗೂ ಸ್ಪರ್ಧೆ ಮಾಡಿದ್ದರು. ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್‌ ಸಮಾವೇಶ ನಡೆಸುವ ಸಂಬಂಧ ಮಾತನಾಡಲು ಪ್ರಿಯಾಂಕಾ ಗಾಂಧಿಯವರು ಕರೆದಿದ್ದರಂತೆ. ಹೀಗಾಗಿ, ಅರ್ಚನಾ ಅವರು ರಾಯಪುರಕ್ಕೆ ಬಂದಿದ್ದಾರೆ. ಆದ್ರೆ ಪ್ರಿಯಾಂಕಾ ಪಿಎ ಅವರು ಅರ್ಚನಾಗೆ ಭೇಟಿ ಮಾಡಲು ಬಿಟ್ಟಿಲ್ಲ. ಪ್ರಿಯಾಂಕಾ ಅವರೇ ಕರೆದಿದ್ದಾರೆ ಎಂದರೂ ಪ್ರಿಯಾಂಕಾ ಭೇಟಿಗೆ ಅವಕಾಶ ಕೊಡಲಿಲ್ಲವಂತೆ. ಈ ಹಿನ್ನೆಲೆಯಲ್ಲಿ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ. ಈ ವೇಳೆ ಪ್ರಿಯಾಂಕಾ ಗಾಂಧಿ ಪಿಎ ಅರ್ಚನಾಗೆ ಕೆಟ್ಟ ಶಬ್ದಗಳಲ್ಲಿ ಬೈಯ್ದು ಕೊಲೆ ಬೆದರಿಕೆ ಹಾಕಿದ್ದಾರಂತೆ.

Share Post