Cinema

ಲೈಗರ್‌ ಟೀಸರ್‌ನಲ್ಲಿ ವಿಜಯ್‌ ಅಬ್ಬರ

ಹೈದರಾಬಾದ್‌ : ವಿಜಯ್‌ ದೇವರಕೊಂಡ ಅಭಿನಯದ ಬಹು ನಿರೀಕ್ಷಿತ ಲೈಗರ್‌ ಸಿನಿಮಾದ ಟೀಸರ್‌ ಇಂದು ಬಿಡುಗಡೆಗೊಂಡಿದೆ. ಹೊಸ ವರ್ಷದ ಹಿಂದಿನ ದಿನ ಲೈಗರ್ ಸಿನಿಮಾದ ಟೀಸರ್ ಬಿಡುಗಡೆಯಾಗಿದ್ದು, ಈ ಚಿತ್ರದಲ್ಲಿ ವಿಜಯ್ ದೇವರಕೊಂಡ ಖಡಕ್ ಬಾಕ್ಸರ್ ಆಗಿ ಕಾಣಿಸಿಕೊಂಡಿದ್ದಾರೆ.

ಬೀದಿ ಬೀದಿಯಲ್ಲಿ ಚಾಯ್‌ ಮಾರುವ ಯುವಕ ಬಾಕ್ಸರ್‌ ಆಗುವ ಕಥೆಯನ್ನು ಲೈಗರ್‌ ಹೊಂದಿದೆ. ವಿಜಯ್‌ ಎರಡು ವರ್ಷ ಕೆಲಸ ಮಾಡಿರುವ ಈ ಸಿನಿಮಾ ೨೦೨೨  ಆಗಸ್ಟ್‌ನಲ್ಲಿ ತೆರೆಗೆ ಬರಲಿದೆ. ಪ್ಯಾನ್‌ ಇಂಡಿಯಾ ತೆರೆ ಕಾಣ್ತಿರುವ ಈ ಸಿನಿಮಾ ಸಾಕಷ್ಟು ನಿರೀಕ್ಷೆಗಳನ್ನು ಹುಟ್ಟಿಸಿದೆ.

Share Post