Cinema

KGF-2 ಚಿತ್ರದ ʻತೂಫಾನ್‌ʼ ಲಿರಿಕಲ್‌ ಸಾಂಗ್‌ ರಿಲೀಸ್:‌ ಅಭಿಮಾನಿಗಳಿಂದ ಭಾರೀ ಮೆಚ್ಚುಗೆ

ಬೆಂಗಳೂರು: ಯಶ್ ಅಭಿನಯದ ಕನ್ನಡ ಚಿತ್ರ ‘ಕೆಜಿಎಫ್’-೧ ಬಿಡುಗಡೆಯಾಗಿ ಪ್ಯಾನ್ ಇಂಡಿಯಾದಾದ್ಯಂತ ಭರ್ಜರಿ ಯಶಸ್ಸು ಕಂಡಿದೆ. ಅಲ್ಲದೆ ಭರ್ಜರಿ ಕಲೆಕ್ಷನ್ ಕೂಡ ಮಾಡಿದೆ. ಈ ಒಂದೇ ಒಂದು ಚಿತ್ರದ ಮೂಲಕ ಕನ್ನಡ ಚಿತ್ರರಂಗದ ಹಾದಿಯೇ ಬದಲಾಗಿದೆ. 100 ಕೋಟಿ ಗಳಿಸಿದ ಮೊದಲ ಕನ್ನಡ ಚಿತ್ರ ಎಂಬ ದಾಖಲೆ ನಿರ್ಮಿಸಿದೆ. ಚಿತ್ರವು 2018 ರಲ್ಲಿ ಬಿಡುಗಡೆಯಾಗಿ, ಕೆಜಿಎಫ್ ಭಾಗ 2 ಬರಲಿದೆ ಎಂದು ಘೋಷಣೆ ಮಾಡಿದ್ರು. ಸಿನಿಮಾ ಬಿಡುಗಡೆಯಾಗಿ ಮೂರು ವರ್ಷಕ್ಕೂ ಹೆಚ್ಚು ಕಾಲ ಕಳೆದಿದ್ದು,  ಭಾಗ 2ಕ್ಕೆ ದೇಶಾದ್ಯಂತ ನಿರೀಕ್ಷೆ ಇದೆ.

ಏಪ್ರಿಲ್ 14 ರಂದು ಈ ಚಿತ್ರ ಬಿಡುಗಡೆಯಾಗಲಿದೆ. ಇಂದಿನಿಂದ ಚಿತ್ರತಂಡವು ಪ್ರಚಾರವನ್ನು ನಿಧಾನವಾಗಿ ಆರಂಭಿಸಿದೆ. ‘ಕೆಜಿಎಫ್ 2’ ಟ್ರೈಲರ್ ಮಾರ್ಚ್ 27 ರಂದು ಬಿಡುಗಡೆಯಾಗಲಿದೆ ಎಂದು ಈಗಾಗಲೇ ಘೋಷಿಸಲಾಗಿದೆ. ಇದೇ ವೇಳೆ  ‘ಕೆಜಿಎಫ್ 2’ ಚಿತ್ರದ ಇತ್ತೀಚಿನ ಲಿರಿಕಲ್ ಹಾಡು ‘ತೂಫಾನ್’ ಇಂದು (ಮಾರ್ಚ್ 21) ರಂದು ಬಿಡುಗಡೆಯಾಗಿದೆ.

“ತೂಫಾನ್ ತೂಫಾನ್ .. ಮುನ್ನುಗ್ಗೋ ಸಿಡಿಲ ಕಿಚ್ಚಿವನೆ” ಹಾಡು ಪ್ರೇಕ್ಷಕರ ಮನಸೂರೆಗೊಳಿಸಿದೆ. ದೇಶಾದ್ಯಂತ ಯಶ್ ಅಭಿಮಾನಿಗಳು ಹಾಗೂ ಸಿನಿಪ್ರೇಮಿಗಳು ಈ ಚಿತ್ರಕ್ಕಾಗಿ ಕಾತರದಿಂದ ಕಾಯುತ್ತಿದ್ದಾರೆ. ಈ ಹಾಡಿಗೆ ರವಿ ಬಸ್ರೂರು ಸಂಗೀತ ನೀಡಿದ್ದಾರೆ. ರಿಲೀಸ್​ ಆದ ಕೆಲವೇ ನಿಮಿಷಗಳಲ್ಲಿ ಕನ್ನಡ ವರ್ಷನ್​ ಹಾಡು ಲಕ್ಷಾಂತರ ವೀವ್ಸ್​ ಪಡೆದುಕೊಂಡಿದೆ. ಭಾರತದ ಎಲ್ಲಾ ಭಾಷೆಗಳಲ್ಲಿಯೂ ಈ ಲಿರಿಕಲ್‌ ಹಾಡು ಬಿಡುಗಡೆ ಆಗಿದೆ.

Share Post