Cinema

ಮತ್ತೆ ಪೊಲೀಸ್‌ ಆಗ್ತಿದ್ದಾರೆ ಡಾಲಿ ಧನಂಜಯ್

ನಟ ರಾಕ್ಷಸ ಡಾಲಿ ಧನಂಜಯ್‌ ಅವರು ಸಖತ್‌ ಬ್ಯುಸಿ ಆಗಿದ್ದಾರೆ. ಸಾಲು ಸಾಲು ಹಿಟ್ ಸಿನಿಮಾಗಳನ್ನು ಕೊಟ್ಟಿರುವ ಧನಂಜಯ್ ಅವರು ಮತ್ತೊಂದು ಸಿನಿಮಾ ಸಹಿ ಮಾಡಿದ್ದಾರೆ. ಈ ವರ್ಷದಲ್ಲಿ ಧನಂಜಯ್‌ ಅವರ ಮೂರು ಸಿನಿಮಾ ಬಿಡುಗಡೆಯಾಗಿದ್ದವು. ಬಡವ ರಾಸ್ಕಲ್‌, ರತ್ನನ್‌ ಪ್ರಪಂಚ, ಸಲಗ ಎಲ್ಲವೂ ಸಕ್ಸಸ್‌ ಆಗಿತ್ತು.

ದುನಿಯ ವಿಜಯ್‌ ಅವರ ನಿರ್ದೇಶನದಲ್ಲಿ ಮೂಡಿ ಬಂದಿದ್ದ ಸಲಗ ಸಿನಿಮಾದಲ್ಲಿ ಡಾಲಿ ಧನಂಜಯ್‌ ಅವರು ಖಡಕ್‌ ಪೊಲೀಸ್‌ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಸಾಮ್ರಾಟ್‌ ಹೆಸರಲ್ಲಿ ಮಿಂಚಿದ್ದ ಡಾಲಿ ಈಗ ಹೊಯ್ಸಳ ಸಿನಿಮಾದಲ್ಲಿ ಮತ್ತೆ ಪೊಲೀಸ್‌ ಆಗಲಿದ್ದಾರೆ.

ಈ ಸಿನಿಮಾ ಧನಂಜಯ್‌ ಅವರ 25 ನೇ ಸಿನಿಮಾ ಆಗಿದ್ದು KRG ಸ್ಟುಡಿಯೋಸ್‌  ನಿರ್ಮಾಣ ಮಾಡಲಿದೆ. ರತ್ನನ್‌ ಪ್ರಪಂಚ ಚಿತ್ರವನ್ನು ನೇರವಾಗಿ ಓಟಿಟಿಯಲ್ಲಿ ಬಿಡುಗಡೆ ಮಾಡಿದ್ದ KRG ಸ್ಟುಡಿಯೋಸ್‌ ಈ ಸಿನಿಮಾವನ್ನು ಥಿಯೇಟರ್‌ನಲ್ಲಿ ರಿಲೀಸ್‌ ಮಾಡುವ ಆಸೆ ವ್ಯಕ್ತಪಡಿಸಿದ್ದಾರೆ.

ಈ ಚಿತ್ರಕ್ಕೆ ಎಸ್. ಎಸ್.‌ ಥಮನ್‌ ಸಂಗೀತ ನಿರ್ದೇಶಕರಾಗಲಿದ್ದಾರೆ ಮತ್ತು ಮಾಸ್ತಿ ಸಿನಿಮಾಗೆ ಸಂಭಾಷಣೆ ಮಾಡಲಿದ್ದಾರೆ.

Share Post