CinemaCrime

ಕಂಗನಾಗೆ ಕೊಲೆ ಬೆದರಿಕೆ – ಇದಕ್ಕೆಲ್ಲಾ ನಾನು ಅಂಜುವುದಿಲ್ಲ ಎಂದ ಕಂಗನಾ

ಮುಂಬೈ: ತನಗೆ ಕೊಲೆ ಬೆದರಿಕೆ ಹಾಕಲಾಗಿದೆ ಎಂದು ಬಾಲಿವುಡ್‌ ನಟಿ ಕಂಗನಾ ರಣಾವತ್‌ ಅವರು ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಕೊಲೆ ಬೆದರಿಕೆ ಸಂಬಂಧ ದಾಖಲಿಸಿರುವ ದೂರಿಗೆ ಸಂಬಂಧಿಸಿದ ಎಫ್‌ಐಆರ್‌ ಪ್ರತಿಯನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿರುವ ಕಂಗನಾ, ಮುಂಬೈನಲ್ಲಿ ನಡೆದ ಉಗ್ರರ ದಾಳಿಯಿಂದ ಹುತಾತ್ಮರಾದವರನ್ನು ಸ್ಮರಿಸಿದ್ದಾರೆ.

 

ನನಗೆ ಕೆಲವರಿಂದ ಕೊಲೆ ಬೆದರಿಕೆ ಕರೆಗಳು ಬಂದಿವೆ. ಬಟಿಂಡಾದ ಸಹೋದರನೊಬ್ಬ ನನ್ನನ್ನು ಕೊಲ್ಲುವುದಾಗಿ ಬಹಿರಂಗವಾಗಿ ಹೇಳಿದ್ದಾರೆ. ಇಂತಹ ಬೆದರಿಕೆಗಳಿಗೆ ನಾನು ಹೆದರುವುದಿಲ್ಲ. ದೇಶದ ವಿರುದ್ಧ ಪಿತೂರಿ ನಡೆಸುವ ಹಾಗೂ ಉಗ್ರರ ಪಡೆಗಳ ವಿರುದ್ಧ ನಾನು ಸದಾ ಮಾತನಾಡುತ್ತೇನೆ. 80 ರ ದಶಕದಲ್ಲಿ ಪಂಜಾಬ್‌ನಲ್ಲಿ ಗುರುಗಳ ಪುಣ್ಯಭೂಮಿಯನ್ನು ನಾಶಗೊಳಿಸಿ ಖಲಿಸ್ತಾನ ಮಾಡುವ ಕನಸು ಕಾಣುತ್ತಿರುವ ನಕ್ಸಲರಿರಲಿ, ತುಕ್ಡೆ ತುಕ್ಡೆ ಗ್ಯಾಂಗ್‌ಗಳಿರಲಿ, ವಿದೇಶದಲ್ಲಿ ಕುಳಿತಿರುವ ಉಗ್ರರಿರಲಿ. ಅವರ ವಿರುದ್ಧ ನಾನು ದನಿಯೆತ್ತುತ್ತೇನೆ ಎಂದು ಕಂಗನಾ ಹೇಳಿದ್ದಾರೆ.

Share Post