Cinema

ಡ್ಯಾನಿಶ್‌ ಸೇಠ್‌ ಅಭಿನಯದ ಒನ್‌ ಕಟ್‌ ಟು ಕಟ್‌ ಫೆ-3ರಂದು ತೆರೆಗೆ

ಬೆಂಗಳೂರು : ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡದ ಎಂಟರ್ಟೈನರ್‌ ಆಗಿರುವ ಡ್ಯಾನಿಶ್‌ ಸೇಠ್‌ ಅವರ ಒನ್‌ ಕಟ್‌ ಟು ಕಟ್‌ ಸಿನಿಮಾ ಇದೇ ಫೆ ೩ ರಿಂದ ಅಮೆಜಾನ್‌ ಪ್ರೈಮ್‌ನಲ್ಲಿ ಲಭ್ಯವಿರಲಿದೆ.

ಹಂಬಲ್‌ ಪೊಲಿಟೀಷಿಯನ್‌ ನೊಗರಾಜ್‌ ಎಂಬ ಸಿನಿಮಾ ಮೂಲಕ ಸಾಕಷ್ಟು ಹೆಸರುಗಳಿಸಿದ ಡ್ಯಾನಿಶ್‌ ಸೇಠ್‌ ತಮ್ಮ ವಿಡಂಬನಾ ಸಂಭಾಷಣೆ ಮೂಲಕ ಜನರನ್ನು ಹಿಡಿದಿಟ್ಟುಕೊಳ್ಳುತ್ತಾರೆ. ಅಪ್ಪು ಅವರ ಪಿ.ಆರ್.ಕೆ ಬ್ಯಾನರ್‌ನಲ್ಲಿ ಮಾಡಿದ್ದ ಫ್ರೆಂಚ್‌ ಬಿರಿಯಾನಿ ಸಿನಿಮಾ ಕೂಡ ಒಂದಷ್ಟು ಕೀರ್ತಿ ತಂದುಕೊಟ್ಟಿತ್ತು.
ಈಗ ಒನ್‌ ಕಟ್‌ ಟು ಕಟ್‌ ಸಿನಿಮಾದಲ್ಲಿ ಗೋಪಿ ಎಂಬ ಪಾತ್ರದಲ್ಲಿ ಡ್ಯಾನಿಶ್‌ ಕಾಣಿಸಿಕೊಳ್ಳಲಿದ್ದಾರೆ.

ಸಾಮಾಜಿಕ ಮಾಧ್ಯಮ ಹೋರಾಟಗಾರರು ಒತ್ತಾಯಾಳಗಿರಿಸಿಕೊಂಡ ಶಾಲೆಯನ್ನು ಉಳಿಸುವುದೇ ಅವರ ಕೆಲಸಕ್ಕೆ ಸೇರಿದ ಮೊದಲ ಜವಾಬ್ದಾರಿ ಎಂಬ ಕಥಾಹಂದರವನ್ನು ಹೊಂದಿರುವ ಈ ಸಿನಿಮಾವನ್ನು ವಂಶಿಧರ್‌ ಭೋಗರಾಜು ನಿರ್ದೇಶನ ಮಾಡಿದ್ದಾರೆ. ಈ ಸಿನಿಮಾ ಕೂಡ ಪಿ.ಆರ್‌.ಕೆ ಬ್ಯಾನರ್‌ ಇಂದ ಮೂಡಿ ಬರಲಿದೆ.

 

Share Post