Cinema

ಅಚ್ಚುಮೆಚ್ಚಿನ ಸ್ನೇಹಿತನ ಹುಟ್ಟುಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಿದ ನಟ ವಿಶಾಲ್

ಚನ್ನೈ: ಮಾರ್ಚ್‌ 17ಕರುನಾಡ ಯುವರತ್ನ ಪುನೀತ್‌ ರಾಜ್‌ಕುಮಾರ್‌ ಅವರ ಹುಟ್ಟುಹಬ್ಬ ರಾಜ್ಯಾದ್ಯಂತ ಅವರ ಹುಟ್ಟುಹಬ್ಬವನ್ನು ಅವರಿಲ್ಲದ ನೋವಿನಲ್ಲಿಯೂ ಸಮಾಜಮುಖಿ ಕಾರ್ಯಗಳ ನೆರವೇರಿಸುವ ಮೂಲಕ ಅರ್ಥಪೂರ್ಣವಾಗಿ ಅಭಿಮಾನಿಗಳು ಅಚರಿಸಿದ್ದರೆ. ಅನ್ನದಾನ, ರಕ್ತದಾನ, ದೇಹದಾನ ಇತ್ಯಾದಿ ಸಮಾಜ ಮುಖಿ ಸೇವೆ ಮೂಲಕ ಅಪ್ಪು ಹುಟ್ಟು ಹಬ್ಬಕ್ಕೆ ಕೊಡುಗೆಯಅಗಿ ನೀಡಿದ್ದಾರೆ. ಅದರಂತೆಯೇ ಅಪ್ಪು ಅಚ್ಚುಮೆಚ್ಚಿನ ಸ್ನೇಹಿತ, ತಮಿಳು ನಟ ವಿಶಾಲ್‌ ಕೂಡ ಪುನೀತ್‌ ಬರ್ತಡೇಯನ್ನು ಅಷ್ಟೇ ಗೌರವವಾಗಿ ನಡೆಸಿಕೊಟ್ಟಿದ್ದಾರೆ. ವೃದ್ಧಾಶ್ರಮಗಳಲ್ಲಿ ಅನ್ನದಾನ ಮೂಲಕ ಸ್ನೇಹಿತನಿಗೆ ಗೌರವ ಪೂರ್ವಕವಾಗಿ ನಮನಗಳನ್ನು ಸಲ್ಲಿಸಿದ್ದಾರೆ.

ತಮಿಳುನಾಡಿನಲ್ಲಿರುವ ನಾನಾ ವೃದ್ಧಾಶ್ರಮಗಳಲ್ಲಿ ಅನ್ನದಾನ ನಡೆಸಿ ಹಿರಿಯರ ಕೈಯಲ್ಲಿ ಪುನೀತ್‌ಗೆ ಆಶೀರ್ವಾದ ಸಿಗುವಂತೆ ಮಾಡಿದ್ದಾರೆ. ಈ ಬಗ್ಗೆ ವಿಶಾಲ್‌ ಟ್ವೀಟ್‌ ಮಾಡಿದ್ದು, ಮನದಾಳದ ಮಾತುಗಳನ್ನು ಹಂಚಿಕೊಂಡಿದ್ದಾರೆ. ” ಜನ್ಮದಿನದ ಶುಭಾಶಯಗಳು ಪ್ರೀತಿಯ ಸಹೋದರ @ಪುನೀತ್ ರಾಜ್ ಕುಮಾರ್. ನೀನೀವು ನಮ್ಮ ನಡುವೆ ಇಲ್ಲದಿದ್ದರೂ, ನಿಮ್ಮ ಆಲೋಚನೆಗಳು, ನಿಮ್ಮ ಅಮೂಲ್ಯವಾದ ನಗು ಮತ್ತು ನಿಮ್ಮ ಚಿಂತನೆ ಇನ್ನೂ ನಮ್ಮ ಹೃದಯದಲ್ಲಿ ಅಚ್ಚಳಿಯದಂತೆ ಉಳಿದಿದೆ. ನಾವು ಪ್ರತಿದಿನ ನಿನ್ನನ್ನು ಮಿಸ್‌ ಮಾಡಿಕೊಳ್ಳುತ್ತೇವೆ. ಜೇಮ್ಸ್ ಚಿತ್ರಕ್ಕೆ ನನ್ನ ಶುಭಾಶಯಗಳು. ನಾವು ಯಾವಾಗಲೂ ನಿಮಗೆ ನಮ್ಮ ಪ್ರೀತಿ, ವಾತ್ಸಲ್ಯ ಮತ್ತು ಗೌರವವನ್ನು ತೋರಿಸುವುದನ್ನು ಮುಂದುವರಿಸುತ್ತೇವೆ” ಎಂಬ ಭಾವನಾತ್ಮಕ ಟ್ವೀಟ್‌ ಮಾಡಿ ಅಪ್ಪು ಜೊತೆಗಿನ ಫೋಟೋ ಹಂಚಿಕೊಂಡಿದ್ದಾರೆ ವಿಶಾಲ್.‌

Share Post