Bengaluru

ರಾಜ್ಯಾದ್ಯಂತ ಕ್ರಿಸ್‌ಮಸ್‌ ಸಂಭ್ರಮ-ಸಡಗರ

ಬೆಂಗಳೂರು: ರಾಜ್ಯದಾದ್ಯಂತ ಕ್ರಿಸ್‌ಮಸ್‌ ಹಬ್ಬದ ಸಂಭ್ರಮ ಮನೆ ಮಾಡಿದೆ. ಕ್ರೈಸ್ತ ಬಾಂಧವರು ಭಕ್ತಿಯಿಂದ ಯೇಸುಗೆ ಪ್ರಾರ್ಥನೆ ಅರ್ಪಿಸುತ್ತಿದ್ದಾರೆ. ಕೇವಲ ಕ್ರೈಸ್ತರು ಮಾತ್ರವಲ್ಲದೇ ಹಿಂದೂ, ಮುಸ್ಲಿಂ, ಜೈನ, ಬುದ್ಧ ಎಲ್ಲರೂ ಚರ್ಚೆಗೆ ಹೋಗಿ ಪ್ರಾರ್ಥನೆ ಮಾಡ್ತದ್ದಾರೆ. ಜಗತ್ತಿನಾದ್ಯಂತ ಪ್ರತಿ ವರ್ಷದ ಡಿಸೆಂಬರ್ ತಿಂಗಳ ಇಪ್ಪತ್ತೈದನೇ ದಿನವನ್ನು ಯೇಸುಕ್ರಿಸ್ತನ ಹುಟ್ಟುಹಬ್ಬವಾಗಿ ಆಚರಿಸಲಾಗುತ್ತದೆ.

ಉಡುಗೊರೆಗಳನ್ನು ಕೊಡುವುದು ಮತ್ತು ಪಡೆಯುವುದು ಕ್ರಿಸ್ಮಸ್ನ ವಿಶೇಷಗಳಲ್ಲೊಂದು. ಮಕ್ಕಳಿಗೆ ಉಡುಗೊರೆಗಳನ್ನು ತಂದುಕೊಡಲು ʻಸಂತʼ ಬರುತ್ತಾನೆ ಎಂಬುದು ಜನಪ್ರಿಯ ನಂಬುಗೆ. “ಸಾಂಟಾ ಕ್ಲಾಸ್” ಎಂಬುದು “ಸಂತ ನಿಕೋಲಾಸ್” ಎಂಬ ವ್ಯಕ್ತಿಯ ಹೆಸರಿನಿಂದ ಬಂದಿದ್ದು. ಸಂತ ನಿಕೋಲಾಸ್ 4ನೆ ಶತಮಾನದಲ್ಲಿ ಜೀವಿಸಿದ್ದ ಒಬ್ಬ ಕ್ರೈಸ್ತ ಪಾದ್ರಿ. ಮಕ್ಕಳ ಮೇಲಿನ ಪ್ರೀತಿಗೆ ಸಂತ ನಿಕೋಲಾಸ್ ಪ್ರತಿ ವರ್ಷ ಕ್ರಿಸ್ಮಸ್ ದಿನದಂದು ಆತನೇ ಉಡುಗೊರೆ ತಂದುಕೊಡುತ್ತಾನೆ ಎಂದು ಮಕ್ಕಳಿಗೆ ಹೇಳಲಾಗುತ್ತದೆ.

ಎಲ್ಲಾ ಚರ್ಚ್‌ಗಳು ಮಧುವಣಗಿತ್ತಿಯಿಂದ ಶೃಂಗಾರಗೊಂಡಿರುತ್ತವೆ. ಸಿಹಿ ತಿನಿಸುಗಳನ್ನು ಹಂಚಿ, ಕ್ರೈಸ್ತನ ತತ್ವಗಳನ್ನು, ಆದರ್ಶಗಳನ್ನು ಪ್ರಾರ್ಥನೆ ಮಾಡಲಾಗುತ್ತದೆ.

Share Post