BengaluruPolitics

ಬಿ.ಕೆ.ಹರಿಪ್ರಸಾದ್ ರನ್ನು ವಿಚಾರಣೆಗೊಳಪಡಿಸಿದ ಸಿಸಿಬಿ

ಬೆಂಗಳೂರು; ರಾಮಂದಿರ ಉದ್ಘಾಟನೆ ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿ ಗೋಧ್ರಾ ರೀತಿಯ ಘಟನೆ ಸಂಭವಿಸುವ ಸಾಧ್ಯತೆ ಇದೆ ಎಂದು ಕಾಂಗ್ರೆಸ್ ಎಂಎಲ್​ಸಿ ಬಿ.ಕೆ. ಹರಿಪ್ರಸಾದ್​ ಹೇಳಿದ್ದರು. ಈ ಹಿನ್ನೆಲೆಯಲ್ಲಿ ಹರಿಪ್ರಸಾದ್ ಅವರನ್ನು ಇಂದು ಸಿಸಿಬಿ ಅಧಿಕಾರಿಗಳು ವಿಚಾರಣೆ ನಡೆಸಿದ್ದಾರೆ.

 

 ಬೆಂಗಳೂರಿನ ಕೆಕೆ ಗೆಸ್ಟ್​​ಹೌಸ್​ನಲ್ಲಿ ಹರಿಪ್ರಸಾದ್​ ಅವರನ್ನು ಭೇಟಿಯಾದ ಸಿಸಿಬಿ ಅಧಿಕಾರಿಗಳು, ಅವರನ್ನು ವಿಚಾರಣೆಗೊಳಪಡಿಸಿದ್ದಾರೆ. ಸರ್ಕಾರದ ಈ ಕ್ರಮವನ್ನು ಹರಿಪ್ರಸಾದ್ ವಿರೋಧಿಸಿದ್ದಾರೆ. ಬೇಕಿದ್ದರೆ ಅರೆಸ್ಟ್ ಮಾಡಿಕೊಳ್ಳಿ ಎಂದು ಹರಿಪ್ರಸಾದ್ ಆಕ್ರೋಶ ಹೊರಹಾಕಿದ್ದಾರೆ.

 

 ನನ್ನನ್ನು ವಿಚಾರಣೆಗೊಳಪಡಿಸುವಂತೆ ಸರ್ಕಾರವೇ ನಿರ್ದೇಶನ‌ ನೀಡಿದೆ. ಇದು ಕಾಂಗ್ರೆಸ್ ಸರ್ಕಾರವೋ, ಆರ್ ಎಸ್ಎಸ್ ಸರ್ಕಾರವೋ ಎಂದು ಹರಿಪ್ರಸಾದ್ ಪ್ರಶ್ನೆ ಮಾಡಿದ್ದಾರೆ. ನನ್ನ ಪರಿಸ್ಥಿತಿಯೇ ಹೀಗಾದರೆ ಸಾಮಾನ್ಯ ಕಾರ್ಯಕರ್ತರ ಪರಿಸ್ಥಿತಿ ಏನು ಎಂದೂ ಹರಿಪ್ರಸಾದ್ ಪ್ರಶ್ನೆ ಮಾಡಿದ್ದಾರೆ.

 

ಕಲ್ಲಡ್ಕ ಪ್ರಭಾಕರ ಭಟ್, ಸಂಸದ ಅನಂತಕುಮಾರ ಹೆಗಡೆ ವಿರುದ್ಧ ಸರ್ಕಾರ ಏನೂ ಕ್ರಮ ಕೈಗೊಂಡಿಲ್ಲ. ನನ್ನ ವಿರುದ್ಧ ವಿಚಾರಣೆಗೆ ನಿರ್ದೇಶನ ಕೊಟ್ಟಿದೆ ಎಂದು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಲಾಗಿದೆ.

 

Share Post