Bengaluru

ಜನವರಿ 14ಕ್ಕೆ ವೈಎಸ್‌ವಿ ದತ್ತಾ ಕಾಂಗ್ರೆಸ್‌ ಸೇರ್ಪಡೆ; ಹೆಚ್‌.ನಾಗೇಶ್‌ ಕೂಡಾ ಕಾಂಗ್ರೆಸ್‌ ತೆಕ್ಕೆಗೆ

ಬೆಂಗಳೂರು; ಮಾಜಿ ಶಾಸಕ ಹಾಗೂ ಜೆಡಿಎಸ್‌ನಲ್ಲಿ ದಶಕಗಳಿಂದ ಗುರುತಿಸಿಕೊಂಡಿದ್ದ ವೈಎಸ್‌ವಿ ದತ್ತಾ ಅವರು ಕಾಂಗ್ರೆಸ್‌ ಸೇರೋದು ಪಕ್ಕಾ ಆಗಿದೆ. ಅವರ ಜೊತೆಗೆ ಮುಳಬಾಗಿಲು ಶಾಸಕ ಹೆಚ್‌.ನಾಗೇಶ್‌ ಕೂಡಾ ಕಾಂಗ್ರೆಸ್‌ ಸೇರುತ್ತಿದ್ದಾರೆ. ಜನವರಿ 14ರಂದು ನಾಗೇಶ್‌ ಹಾಗೂ ವೈಎಸ್‌ವಿ ದತ್ತಾ ಕಾಂಗ್ರೆಸ್‌ಗೆ ಅಧಿಕೃತವಾಗಿ ಸೇರ್ಪಡೆಯಾಗಲಿದ್ದಾರೆ.

ಮುಳಬಾಗಿಲು ವಿಧಾನಸಭಾ ಕ್ಷೇತ್ರದ ಪಕ್ಷೇತರ ಶಾಸಕ ಹೆಚ್​​.ನಾಗೇಶ್, ಮತ್ತೆ ಅದೇ ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಲು ಆಸಕ್ತಿ ತೋರಿಸಿದ್ದಾರೆ. ಆದ್ರೆ ಕಾಂಗ್ರೆಸ್‌ ನಾಯಕರು ಮಹದೇವಪುರ ಕ್ಷೇತ್ರದಿಂದ ಸ್ಪರ್ಧಿಸಲು ಸೂಚಿಸಿದ್ದಾರೆ ಎನ್ನಲಾಗಿದೆ. ಇನ್ನು ಕಡೂರು ಕ್ಷೇತ್ರದಿಂದ ಈ ಬಾರಿ ವೈಎಸ್‌ವೈ ದತ್ತಾ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರೆ ಎಂದು ತಿಳಿದುಬಂದಿದೆ.

Share Post