ಜನವರಿಯಿಂದ ಟೊಯೊಟಾ ಕಾರುಗಳು ದುಬಾರಿ
ಬೆಂಗಳೂರು : ಎಲ್ಲಾ ಅಗತ್ಯ ವಸ್ತುಗಳ ಬೆಲೆಗಳು ಏರಿಕೆ ಕಂಡಿದೆ. ಈಗ ಬೆಲೆ ಏರಿಕೆಯ ಬಿಸಿ ಆಟೋಮೊಬೈಲ್ ಇಂಡಸ್ಟ್ರಿಗೂ ತಟ್ಟಿದೆ. ಕಚ್ಚಾ ವಸ್ತುಗಳು ಸೇರಿದಂತೆ ಉಕ್ಕು, ಸ್ಟೀಲ್, ಅಲ್ಯುಮಿನಿಯಂ ಮತ್ತು ಇತರೆ ಸಾಮಗ್ರಿಗಳ ಬೆಲೆ ಏರಿಕೆ ಆಗಿರುವುದೇ ಇದಕ್ಕೆ ಕಾರಣ ಎಂದು ಹೇಳಲಾಗ್ತಿದೆ.
ಟೊಯೊಟಾ ಸಂಸ್ಥೆಯೂ ಕೂಡ ಇದೇ ಜನವರಿಯಿಂದ ಹೊಸ ಕಾರುಗಳ ಬೆಲೆಯನ್ನು ಏರಿಸಲಿದೆ. ಆದರೆ ಗ್ರಾಹಕರ ತುಂಬಾ ಕಡಿಮೆ ಪ್ರಮಾಣದಲ್ಲಿ ಇದು ಪರಿಣಾಮ ಬೀರುವಂತೆ ಎಚ್ಚರ ವಹಿಸುತ್ತಿದ್ದೇವೆ ಎಂದು ಟೊಯೊಟಾ ಸಂಸ್ಥೆ ತಿಳಿಸಿದೆ.