BengaluruPolitics

ಹಣ ಹಾಕುವ ಡೋಂಗಿ ರಾಜಕಾರಣ ಸರಿಯಲ್ಲ; ನಳಿನ್‌ ಕುಮಾರ್‌ ಕಟೀಲ್‌

ಬೆಂಗಳೂರು; ಹಣ ಹಾಕುವ ಡೋಂಗಿ ರಾಜಕಾರಣ ಸರಿಯಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಟೀಕಿಸಿದ್ದಾರೆ. ರಾಜ್ಯ ಸರ್ಕಾರ ಅಕ್ಕಿಗೆ ಬದಲಾಗಿ ಹಣ ನೀಡುವ ತೀರ್ಮಾನದ ಬಗ್ಗೆ ಮಾತನಾಡಿರುವ ಅವರು, ಚುನಾವಣೆಯಲ್ಲಿ ಹತ್ತು ಕೆಜಿ ಅಕ್ಕಿ ಕೊಡುತ್ತೇವೆ ಎಂದು ಹೇಳಿದ್ದರು. ಆದ್ರೆ ಈಗ ಮಾತು ತಪ್ಪಿದ್ದಾರೆ ಎಂದು ಹೇಳಿದ್ದಾರೆ.

ಕಾಂಗ್ರೆಸ್‌ನವರು ಅಕ್ಕಿ ಕೊಡುತ್ತೇವೆ ಎಂದು ಹೇಳಿದ್ದರು. ಅದೂ ಕೂಡಾ ತಲಾ ಹತ್ತು ಕೆಜಿ ಅಕ್ಕಿ ಕೊಡುತ್ತೇವೆ ಎಂದಿದ್ದರು. ಈಗ ಮೋದಿ ಸರ್ಕಾರ ಐದು ಕೆಜಿ ಅಕ್ಕಿ ಕೊಡುತ್ತಿದೆ. ಈಗ ಇವರದ್ದೂ ಸೇರಿಸಿ ಹದಿನೈದು ಕೆಜಿ ಅಕ್ಕಿ ಕೊಡಬೇಕು. ಆದ್ರೆ ಅದನ್ನು ಕೊಡೋದಕ್ಕೆ ಆಗದೇ ರಾಜ್ಯ ಸರ್ಕಾರ ಡೋಂಗಿ ರಾಜಕಾರಣ ಮಾಡಲು ಹೊರಟಿದೆ ಎಂದಿದ್ದಾರೆ.

ಇನ್ನು ಇದೇ ವೇಳೆ ಮಾತನಾಡಿರುವ ಬಿಜೆಪಿ ಎಂಎಲ್‌ಸಿ ರವಿಕುಮಾರ್‌ ಅವರು ಸಿದ್ದರಾಮಯ್ಯ ಸರ್ಕಾರ ಬಡವರಿಗೆ ಮೋಸ ಮಾಡಿದೆ. ಹಣ ತಿನ್ನೋದಕ್ಕೆ ಆಗೋದಿಲ್ಲ, ಅಕ್ಕಿ ಕೊಡುತ್ತೇವೆ ಎಂದಿದ್ದರು ಕೊಡಲಿ ಎಂದು ಆಗ್ರಹಿಸಿದ್ದಾರೆ.
ತಲಾ ಹತ್ತು ಕೆಜಿ ಅಕ್ಕಿ ಕೊಡುತ್ತೇವೆ ಎಂದು ಹೇಳಿ ಮೋಸ ಮಾಡಿದ್ದೀರಿ ಕಿಡಿ ಕಾರಿದ್ದಾರೆ.

ಆದ್ರೆ ಕೇಂದ್ರ ಅಕ್ಕಿ ಕೊಡುತ್ತಿಲ್ಲ ಎಂದು ಕಾಂಗ್ರೆಸ್‌ ನಾಯಕರು ಹೇಳಿದಾಗ ಕೆಲ ಬಿಜೆಪಿ ನಾಯಕರು ಅಕ್ಕಿಗೆ ಬದಲಾಗಿ ಹಣ ಕೊಡಲಿ ಎಂದು ಆಗ್ರಹಿಸಿದ್ದರು. ಆದ್ರೆ ಇದೀಗ, ಅವರೇ ಹಣ ತಿನ್ನೋದಕ್ಕೆ ಆಗುವುದಿಲ್ಲ ಎನ್ನುತ್ತಿದ್ದಾರೆ. ಈ ಈ ವಿಚಾರ ಈಗ ಚರ್ಚೆಯ ವಸ್ತುವಾಗಿದೆ.

Share Post