BengaluruPolitics

ಅಕ್ಕಿ ಇಲ್ಲ ಎಂದುಬಿಟ್ಟ ತೆಲಂಗಾಣ; ಏನು ಮಾಡುತ್ತೆ ರಾಜ್ಯ ಸರ್ಕಾರ..?

ಬೆಂಗಳೂರು; ಅನ್ನಭಾಗ್ಯ ಯೋಜನೆಗೆ ಹಣ ಕೊಟ್ಟರೂ ಹೆಚ್ಚಿನ ಅಕ್ಕಿ ಪೂರೈಸಲು ಕೇಂದ್ರ ಸರ್ಕಾರ ನಿರಾಕರಿಸಿದೆ. ಹೀಗಾಗಿ, ರಾಜ್ಯ ಕಾಂಗ್ರೆಸ್‌ ಸರ್ಕಾರ ಕೊಟ್ಟ ಭರವಸೆಯನ್ನು ಈಡೇರಿಸಲು ಪರಿಪಾಟಲು ಪಡುತ್ತಿದೆ. ಅಕ್ಕಿ ಹೆಚ್ಚು ಬೆಳೆಯುವ ರಾಜ್ಯಗಳಿಗೆ ಅಕ್ಕಿಗಾಗಿ ಮೊರೆಹೋಗಿದೆ. ಆದ್ರೆ ತೆಲಂಗಾಣ ಸರ್ಕಾರ ನಮ್ಮಲ್ಲಿ ಅಕ್ಕಿ ಇಲ್ಲ. ಪೂರೈಸಲು ಸಾಧ್ಯವಿಲ್ಲ ಎಂದು ಹೇಳಿಬಿಟ್ಟಿದೆ. ಇದರಿಂದಾಗಿ ರಾಜ್ಯ ಸರ್ಕಾರಕ್ಕೆ ತಲೆನೋವು ಶುರುವಾಗಿದೆ.

ಆಂಧ್ರ ಪ್ರದೇಶ ಹಾಗೂ ತೆಲಂಗಾಣದಲ್ಲಿ ಹೆಚ್ಚು ಅಕ್ಕಿ ಬೆಳೆಯಲಾಗುತ್ತದೆ. ಈ ರಾಜ್ಯಗಳು ಅಕ್ಕಿ ಕೊಟ್ಟರೆ ಸಾಗಣೆ ವೆಚ್ಚ ಕಡಿಮೆಯಾಗುತ್ತದೆ. ಜೊತೆಗೆ ಬಹುಬೇಗ ತರಿಸಿಕೊಳ್ಳಬಹುದು. ಆದ್ರೆ ತೆಲಂಗಾಣದಲ್ಲಿ ಅಕ್ಕಿ ದಾಸ್ತಾನಿಲ್ಲ ಎಂದು ಅಲ್ಲಿನ ಸಿಎಂ ಕೆ.ಚಂದ್ರಶೇಖರರಾವ್‌ ತಿಳಿಸಿಬಿಟ್ಟಿದ್ದಾರೆ. ಹೀಗಂತ ಸಿಎಂ ಸಿದ್ದರಾಮಯ್ಯ ಅವರೇ ಹೇಳಿದ್ದಾರೆ.

ಇನ್ನು ಆಂಧ್ರಪ್ರದೇಶ ಏನು ಹೇಳುತ್ತೆ ಕಾದುನೋಡಬೇಕು. ಆಂಧ್ರ ಸಿಎಂ ಜೊತೆ ಮಾತನಾಡಿ ಎಂದು ಸಿದ್ದರಾಮಯ್ಯ ಅವರು ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಸೂಚಿಸಿದ್ದಾರಂತೆ. ಆಂಧ್ರದವರೂ ಕೈ ಎತ್ತಿದರೆ ಅನ್ನಭಾಗ್ಯ ಜಾರಿಗೆ ಕಷ್ಟವಾಗಬಹುದು.

ಇನ್ನು ಛತ್ತಿಸ್‌ ಗಢ ಸರ್ಕಾರ 1.5 ಲಕ್ಷ ಟನ್‌ ಅಕ್ಕಿ ಕೊಡಲು ಒಪ್ಪಿಗೆ ಸೂಚಿಸಿದ್ದಾರೆ. ಆದ್ರೆ ದರ ದುಬಾರಿ ಇದೆಯಂತೆ. ಜೊತೆಗೆ ಸಾಗಣೆ ವೆಚ್ಚವೂ ಹೆಚ್ಚಾಗಲಿದೆಯಂತೆ. ಹೀಗಾಗಿ ಏನು ಮಾಡೋದು ಅಂತ ಸರ್ಕಾರ ಚಿಂತಿಸುತ್ತಿದೆ.

 

Share Post