BengaluruPolitics

ಇಂದು ರಾಜ್ಯ ಬಜೆಟ್‌ ಮಂಡನೆ; ಹೊಸ ಬಟ್ಟೆ ಧರಿಸಿ ವಿಧಾನಸೌಧಕ್ಕೆ ಬಂದ ಸಿಎಂ

ಬೆಂಗಳೂರು; ರಾಜ್ಯದಲ್ಲಿ ಹೊಸ ಸರ್ಕಾರ ರಚನೆಯಾಗಿರುವ ಹಿನ್ನೆಲೆಯಲ್ಲಿಇಂದು ರಾಜ್ಯ ಬಜೆಟ್‌ ಮಂಡನೆ ಮಾಡಲಾಗುತ್ತಿದೆ. ಸಿದ್ದರಾಮಯ್ಯ ಅವರು ಮಂಡಿಸುತ್ತಿರುವ 14ನೇ ಬಜೆಟ್‌ ಇದು. ಐದು ಗ್ಯಾರೆಂಟಿಗಳನ್ನು ಘೋಷಣೆ ಮಾಡಿರುವುದರಿಂದ ಇದಕ್ಕೆ ಹಣ ಹೊಂದಿಸುವುದರ ಜೊತೆಗೆ ಇತರೆ ಯೋಜನೆಗಳಿಗೆ ಹೇಗೆ ಹಣ ಒದಗಿಸುತ್ತಾರೆ ಎಂಬುದು ಕುತೂಹಲ.

ಇಂದು ಮಧ್ಯಾಹ್ನ 12 ಗಂಟೆಗೆ ಸಿಎಂ ಸಿದ್ದರಾಮಯ್ಯ ಬಜೆಟ್‌ ಮಂಡನೆ ಮಾಡಲಿದ್ದಾರೆ.  ಅಂಗನವಾಡಿ, ಆಶಾ ಕಾರ್ಯಕರ್ತರ ಗೌರವ ಧನ ಹೆಚ್ಚಿಸುವ ಸಾಧ್ಯತೆಯಿದೆ. ಕಳೆದ ಮಾರ್ಚ್‌ನಲ್ಲಿ ಸಿಎಂ ಆಗಿದ್ದ ಬಸವರಾಜ ಬೊಮ್ಮಾಯಿಯವರು,  3.09 ಲಕ್ಷ ಕೋಟಿ ಗಾತ್ರದ ಬಜೆಟ್ ಮಂಡಿಸಿದ್ದರು. ಈ ಬಾರಿ ಸಿದ್ದರಾಮಯ್ಯ ಅವರು ಬಜೆಟ್ ಗಾತ್ರ 3 ಲಕ್ಷದ 35 ಸಾವಿರದಿಂದ 40 ಸಾವಿರ ಕೋಟಿವರೆಗೂ ಹೆಚ್ಚಬಹುದು ಎನ್ನಲಾಗಿದೆ. 2023-24ನೇ ಸಾಲಿನ ಬಜೆಟ್ ನಲ್ಲಿ 77,750 ಕೋಟಿ ವರೆಗೆ ಸಾಲ ಪಡೆಯಲು ಅವಕಾಶವಿದೆ.

Share Post