Bengaluru

ಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟ; ಈ ಬಾರಿ ಚಿತ್ರದುರ್ಗ ಜಿಲ್ಲೆ ಪ್ರಥಮ

ಬೆಂಗಳೂರು; ಎಸ್‌ಎಸ್‌ಎಲ್‌ ಪರೀಕ್ಷಾ ಫಲಿತಾಂಶ ಪ್ರಕಟವಾಗಿದೆ. ಈ ಬಾರಿ ಚಿತ್ರದುರ್ಗ ಜಿಲ್ಲೆ 96.8ರಷ್ಟು ಫಲಿತಾಂಶದೊಂದಿಗತೆ ಪ್ರಥಮ ಸ್ಥಾನ ಪಡೆದುಕೊಂಡಿದೆ. ಮಂಡ್ಯ ದ್ವಿತೀಯ ಹಾಗೂ ಹಾಸನ ತೃತೀಯ ಸ್ಥಾನ ಪಡೆದಿವೆ. ಯಾದಗಿರಿ ಜಿಲ್ಲೆಗೆ ಕೊನೆಯ ಸ್ಥಾನ ಸಿಕ್ಕಿದೆ. ಸುಮಾರು 7 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಇದರಲ್ಲಿ ಶೇ.83.89 ರಷ್ಟು ವಿದ್ಯಾರ್ಥಿಗಳು ಪಾಸಾಗಿದ್ದಾರೆ. ನಾಲ್ವರು ವಿದ್ಯಾರ್ಥಿಗಳು 625ಕ್ಕೆ 625 ಅಂಕ ಪಡೆದು ರಾಜ್ಯಕ್ಕೆ ಪ್ರಥಮ ಸ್ಥಾನವನ್ನು ಹಂಚಿಕೊಂಡಿದ್ದಾರೆ.

3,41,108 ಬಾಲಕರು ಹಾಗೂ 3,59,511 ಬಾಲಕಿಯರು ಉತ್ತೀರ್ಣರಾಗಿದ್ದಾರೆ.

ಶೈಕ್ಷಣಿಕ ಜಿಲ್ಲಾವಾರು ಫಲಿತಾಂಶ ಈ ರೀತಿ ಇದೆ:
೧. ಚಿತ್ರದುರ್ಗ -ಶೇ.96.8
೨. ಮಂಡ್ಯ-ಶೇ.96.74
೩. ಹಾಸನ-ಶೇ.96.68
೪. ಬೆಂಗಳೂರು ಗ್ರಾಮಾಂತರ-ಶೇ.96.48
೫. ಚಿಕ್ಕಬಳ್ಳಾಪುರ-ಶೇ.96.15
೬. ಕೋಲಾರ-ಶೇ.94.6
೭. ಚಾಮರಾಜನಗರ -ಶೇ.,94.32
೮. ಮಧುಗಿರಿ- ಶೇ.93.23
೯. ಕೊಡಗು-ಶೇ.93.19
೧೦. ವಿಜಯನಗರ- ಶೇ.91.41
೧೧. ವಿಜಯಪುರ- ಶೇ. 91.23
೧೨. ಚಿಕ್ಕೋಡಿ-91.07
೧೩. ಉತ್ತರಕನ್ನಡ- ಶೇ.90.53
೧೪. ದಾವಣಗೆರೆ- ಶೇ.90.43
೧೫. ಕೊಪ್ಪಳ- ಶೇ.90.27
೧೬. ಮೈಸೂರು ಜಿಲ್ಲೆ- ಶೇ.89.75
೧೭. ಚಿಕ್ಕಮಗಳೂರು-ಶೇ.89.69
೧೮. ಉಡುಪಿ- ಶೇ. 89.49
೧೯. ದಕ್ಷಿಣ ಕನ್ನಡ- ಶೇ. 89.47
೨೦. ತುಮಕೂರು- ಶೇ. 89.43
೨೧. ರಾಮನಗರ- ಶೇ. 89.42
೨೨. ಹಾವೇರಿ ಶೇ.89.11
೨೩. ಶಿರಸಿ- ಶೇ.87.39
೨೪. ಧಾರವಾಡ-ಶೇ.86.55
೨೫. ಗದಗ-ಶೇ.86.51
೨೬. ಬೆಳಗಾವಿ-ಶೇ.85.85
೨೭. ಬಾಗಲಕೋಟೆ-ಶೇ.85.14
೨೮. ಕಲಬುರಗಿ- ಶೇ.84.51
೨೯. ಶಿವಮೊಗ್ಗ-ಶೇ.84.04
೩೦. ರಾಯಚೂರು- ಶೇ. 84.02
೩೧. ಬಳ್ಳಾರಿ- ಶೇ.81.54
೩೨. ಬೆಂಗಳೂರು ಉತ್ತರ ಶೇ.80.93
೩೩. ಬೆಂಗಳೂರು ದಕ್ಷಿಣ ಶೇ.78.95
೩೪. ಬೆಂಗಳೂರು ಪಶ್ಚಿಮ ಶೇ.80.93
೩೫. ಬೀದರ್ ಶೇ. 78.73
೩೬. ಯಾದಗಿರಿಗೆ ಕೊನೆಯ ಸ್ಥಾನ- ಶೇ.75.49

Share Post