BengaluruNational

ಉತ್ತರದಿಂದ ಸಿದ್ದು, ದಕ್ಷಿಣದಲ್ಲಿ ಡಿಕೆಶಿ ಪ್ರಜಾಧ್ವನಿ ಯಾತ್ರೆ

ಬೆಂಗಳೂರು; ಕಾಂಗ್ರೆಸ್ ನ ಜಂಟಿಯಾತ್ರೆ ಮುಗೀತು. ಇನ್ಮುಂದೆ ಒಂಟಿ ಯಾತ್ರೆ. ಪ್ರಜಾಧ್ವನಿ ಬಸ್ ಯಾತ್ರೆ ಮೂಲಕ ಸಿದ್ದರಾಮಯ್ಯ ಮತ್ತು ಡಿ ಕೆ ಶಿವಕುಮಾರ್ ಜಂಟಿಯಾಗಿ ಯಾತ್ರೆ ಮಾಡಿದ್ದರು.‌ ಪ್ರಜಾಧ್ವನಿ ಸಮಾವೇಶದ ಮೂಲಕ ಜಿಲ್ಲೆ ಜಿಲ್ಲೆಗಳಿಗೆ ಸಂಚಾರ ಮುಗಿಸಿ ಈಗ ಕ್ಷೇತ್ರವಾರು ಸಂಚಾರಕ್ಕೆ ಸಿದ್ದತೆ ನಡೆಸುತಿದ್ದಾರೆ.

ಫೆಬ್ರವರಿ 3 ರಿಂದ ಒಂಟಿ ಯಾತ್ರೆ ಆರಂಭ ಮಾಡಲಿದ್ದಾರೆ. ಉತ್ತರದಲ್ಲಿ ಸಿದ್ದು, ದಕ್ಷಿಣದಲ್ಲಿ ಡಿಕೆಶಿ ಯಾತ್ರೆ ಮಾಡಲು ಪ್ಲಾನ್ ಮಾಡಲಾಗಿದೆ. ಉತ್ತರದಲ್ಲಿ ಬೀದರ್ ಜಿಲ್ಲೆಯ ಬಸವ ಕಲ್ಯಾಣದಿಂದ ವಿಪಕ್ಷ ನಾಯಕ ಸಿದ್ದರಾಮಯ್ಯ ಬಸ್ ಯಾತ್ರೆ ಮಾಡಿದರೆ, ದಕ್ಷಿಣದಲ್ಲಿ ಕೋಲಾರದಿಂದ ಪಕ್ಷದ ಅಧ್ಯಕ್ಷರಾದ ಡಿ ಕೆ ಶಿವಕುಮಾರ್ ಯಾತ್ರೆ ಪ್ರಾರಂಭಿಸಲಿದ್ದಾರೆ.

ಡಿಕೆಶಿವಕುಮಾರ್ ನೇತೃತ್ವದ ಬಸ್ ಯಾತ್ರೆ ಡಿಟೇಲ್ಸ್:
ಫೆ.೩ – ಮುಳಬಾಗಿಲು, ಕೆಜಿಎಫ್ ಕ್ಷೇತ್ರ
ಫೆ. ೪ – ಮಾಲೂರು, ದೇವನಹಳ್ಳಿ ಕ್ಷೇತ್ರ
ಫೆ. ೬ – ಹಿರಿಯೂರು, ಚಳ್ಳಕೆರೆ, ಮೊಳಕಾಲ್ಮೂರು
ಫೆ. ೭- ಚಿತ್ರದುರ್ಗ, ಹೊಳಲ್ಕೆರೆ, ಹೊಸದುರ್ಗ
ಫೆ. ೮- ಶಿಕಾರಿಪುರ, ಸೊರಬ, ಸಾಗರ
ಫೆ. ೯- ತೀರ್ಥಹಳ್ಳಿ, ಭದ್ರಾವತಿ

 

ಸಿದ್ದರಾಮಯ್ಯ ನೇತೃತ್ವದ ಬಸ್‌ ಯಾತ್ರೆ

ಫೆ. ೩  ಬೀದರ್ ನ ಬಸವ ಕಲ್ಯಾಣ, ಭಾಲ್ಕಿ
ಫೆ. ೪ ರಂದು ಔರಾದ್, ಬೀದರ್ ಹಾಗೂ ಬೀದರ್ ದಕ್ಷಿಣ

ಫೆ.೪ ರ ಸಂಜೆ ಹುಮ್ನಾಬಾದ್
ಫೆ.೪ ರಂದು ಕಲಬುರ್ಗಿ
ಫೆ.೬ ರಂದು ಗುಲಬರ್ಗಾ ಗ್ರಾಮೀಣ, ಚಿಂಚೋಳಿ, ಸೇಡಂ
ಫೆ.೭ ರಂದ ಆಳಂದ, ಅಫ್ಜಲಪುರ, ಯಡ್ರಾಮಿ ಜೇವರ್ಗಿ
ಫೆ. ೮ ರಂದು ಚಿತ್ತಾಪುರ
ಫೆ. ೧೦ ರಂದು ಸುರಪೂರ, ಶಹಪುರ, ಕಲಬುರ್ಗಿ ಉತ್ತರ ಹಾಗೂ ದಕ್ಷಿಣ
ಫೆ. ೧೧ ರಂದು ಸಿಂಧಗಿ, ಇಂಡಿ, ನಾಗಠಾಣಾ
ಫೆ. ೧೨ ರಂದು ಬಬಲೇಶ್ವರ, ದೇವರ ಹಿಪ್ಪರಗಿ, ಬಸವನಬಾಗೇವಾಡಿ

 

 

 

 

Share Post