ವಿಶ್ವೇಶ್ವರ ಭಟ್ ಕಾರ್ಯಕ್ರಮಕ್ಕೆ ಸಿದ್ದರಾಮಯ್ಯ; ಪ್ರಗತಿಪರರ ವಿರೋಧ
ಬೆಂಗಳೂರು; ಬಲ ಪಂಥೀಯ ಪತ್ರಕರ್ತ ಎಂದೇ ಬಿಂಬಿತವಾಗಿರುವ ವಿಶ್ವೇಶ್ವರ ಭಟ್ ಅವರ ಆರು ಪುಸ್ತಕಗಳು ಇದೇ ಜುಲೈ 22ರಂದು ಬಿಡುಗಡೆಯಾಗುತ್ತಿವೆ. ಈ ಪುಸ್ತಕಗಳನ್ನು ಲೋಕಾರ್ಪಣೆ ಮಾಡುತ್ತಿರುವವರು ಬೇರೆ ಯಾರೂ ಅಲ್ಲ ಸಿಎಂ ಸಿದ್ದರಾಮಯ್ಯ. ಸಿದ್ದರಾಮಯ್ಯ ವಿರುದ್ಧ ಹಾಗೂ ಎಡ ಪಂಥೀಯರ ವಿರುದ್ಧ ಬರೆಯುತ್ತಿರುವ ಬಂದಿರುವ ವಿಶ್ವೇಶ್ವರ ಭಟ್ ಅವರ ಪುಸ್ತಕಗಳ ಲೋಕಾರ್ಪಣೆಗೆ ಸಿದ್ದರಾಮಯ್ಯ ಅವರು ಹೋಗುತ್ತಿರುವುದು ಬಲಪಂಥೀಯರನ್ನು ಕೆರಳಿಸಿದೆ. ಅದು ಹೇಗೆ ನೀವು ಆ ಕಾರ್ಯಕ್ರಮಕ್ಕೆ ಹೋಗುತ್ತಿದ್ದೀರಿ ಎಂದು ಪ್ರಶ್ನೆ ಮಾಡುತ್ತಿದ್ದಾರೆ.
ಬೆಂಗಳೂರಿನ ಟೌನ್‌ಹಾಲ್‌ನಲ್ಲಿ ಜುಲೈ 22ರಂದು ಕಾರ್ಯಕ್ರಮ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ, ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಹಾಗೂ ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ ಪಾಲ್ಗೊಳ್ಳುತ್ತಿದ್ದಾರೆ. ಅಂದು ವಿಶ್ವವಾಣಿ ಪ್ರಕಟಣೆ ಮಾಡಿರುವ ಆರು ಪುಸ್ತಕಗಳನ್ನು ಬಿಡುಗಡೆ ಮಾಡಲಾಗುತ್ತಿದೆ. ಈ ಕಾರ್ಯಕ್ರದಲ್ಲಿ ಸಿಎಂ ಸಿದ್ದರಾಮಯ್ಯ ಪಾಲ್ಗೊಳ್ಳುತ್ತಿರುವುದು ಪ್ರಗತಿಪರರಿಗೆ ಅಚ್ಚರಿಯನ್ನುಂಟು ಮಾಡಿದೆ.
ಕಾರ್ಯಕ್ರಮದ ಆಹ್ವಾನ ಪತ್ರಿಕೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದಂತೆ ಪ್ರಗತಿ ಪರರ ಸಿದ್ದರಾಮಯ್ಯ ಅವರು ಈ ಕಾರ್ಯಕ್ರಮಕ್ಕೆ ಹೋಗಬಾರದು ಎಂದು ಹೇಳುತ್ತಿದ್ದಾರೆ. ಈ ಹಿಂದೆ ವಿಶ್ವೇಶ್ವರ ಭಟ್ ಅವರು ಬರೆದ ಬರಹಗಳು, ಟ್ವೀಟ್‌ಗಳನ್ನು ನೆನೆಪಿಸುತ್ತಾ ಇಂತಹವರ ಕಾರ್ಯಕ್ರಮಕ್ಕೆ ಹೇಗೆ ಹೋಗುತ್ತೀರಿ ಎಂದು ಪ್ರಶ್ನೆ ಮಾಡಿದ್ದಾರೆ.
ಪತ್ರಕರ್ತೆ ಗೌರಿ ಲಂಕೇಶ್ ಕೊಲೆಯಾದಾಗ ಅವರ ಬಗ್ಗೆ ಕೇವಲವಾಗಿ ಬರೆದಿದ್ದರು. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಬಗ್ಗೆಯೂ ಅದೇ ರೀತಿ ಬರೆದಿದ್ದರು. ಕಾಗೆಯ ಬಣ್ಣಕ್ಕೆ ಹೋಲಿಸಿದ್ದರು. ಸಿದ್ದರಾಮಯ್ಯ ಹಾಗೂ ರಾಹುಲ್ ಗಾಂಧಿಯವರ ಬಗ್ಗೆಯೂ ವಿಶ್ವೇಶ್ವರ ಭಟ್ ಅವರು ಅವಹೇಳನ ಮಾಡಿ ಬರೆದಿದ್ದರು. ಹೀಗಿದ್ದರೂ ನೀವು ಹೇಗೆ ಅವರ ಕಾರ್ಯಕ್ರಮಕ್ಕೆ ಹೋಗುತ್ತಿದ್ದೀರಿ ಎಂದು ಹಲವರು ಪ್ರಶ್ನೆ ಮಾಡಿದ್ದಾರೆ.
ಯಾವುದೇ ಕಾರಣಕ್ಕೂ ಸಿದ್ದರಾಮಯ್ಯ ಅವರು ವಿಶ್ವೇಶ್ವರ ಭಟ್ ಅವರ ಕಾರ್ಯಕ್ರಮಕ್ಕೆ ಹೋಗಬಾರದು ಅನ್ನೋದು ಪ್ರಗತಿಪರರ ಆಗ್ರಹ. ಸಿದ್ದರಾಮಯ್ಯ ಅವರು ಪ್ರಗತಿ ಪರರಿಗೆ ಮನ್ನಣೆ ಕೊಡುತ್ತಾರಾ..? ಅಥವಾ ಕಾರ್ಯಕ್ರಮಕ್ಕೆ ಹೋಗುತ್ತಾರಾ..? ನೋಬೇಕು.