Bengaluru

ʻಕೈʼ ನಾಯಕರ ಧರಣಿ ನಡುವೆಯೇ ಸದನದಲ್ಲಿ ವಿಧೇಯಕಗಳ ಮಂಡನೆ-ಕಲಾಪ ನಾಳೆಗೆ ಮುಂದೂಡಿಕೆ

ವಿಧಾನಸಭೆ: ಸಚಿವ ಈಶ್ವರಪ್ಪ ವಿರುದ್ಧ ವಿಧಾನಸಭೆ ಕಲಾಪದಲ್ಲಿ ಕಾಂಗ್ರೆಸ್‌ ನಾಯಕರ ಧರಣಿ ಮುಂದುವರೆದಿದೆ. ಕೂಡಲೇ ಸಚಿವ ಸ್ಥಾನದಿಂದ ಈಶ್ವರಪ್ಪ ಅವರನ್ನು ವಜಾ ಮಾಡುವಂತೆ ಆಗ್ರಹಿಸಿ ಕೈ ನಾಯಕರು ಪ್ರೊಟೆಸ್ಟ್‌ ಮಾಡ್ತಿದಾರೆ.

ಇತ್ತ ಕಾಂಗ್ರೆಸ್‌ ನಾಯಕರ ಪ್ರತಿಭಟನೆಗೆ ಜಗ್ಗದೆ ಆಡಳಿತ ಪಕ್ಷ ಬಿಜೆಪಿ ವಿಧೇಯಕಗಳನ್ನು ಮಂಡನೆ ಮಾಡುತ್ತಿದೆ. 2022ನೇ ಸಿವಿಲ್‌ ಸರ್ವಿಸ್‌ ವಿಧೇಯಕ ಮಂಡನೆ, 2022ನೇ ಸಾಲಿನ ಕ್ರಿಮಿನಲ್‌ ಕಾನೂನು ತಿದ್ದುಪಡಿ ವಿಧೇಯಕ ಮಂಡನೆಯನ್ನು ಕಾನೂನು ಸಚಿವ ಮಾಧುಸ್ವಾಮಿ ಮಂಡನೆ ಮಾಡಿದ್ದಾರೆ. ಮುಖ್ಯಮಂತ್ರಿ ಬಸವರಾಜ್‌ ಬೊಮ್ಮಾಯಿಯವರ ಪರವಾಗಿ ಮಾಧುಸ್ವಾಮಿ ವಿಧೇಯಕ ಮಂಡನೆ ಮಾಡಿದ್ರು.

2022ನೇ ಸಾಲಿನ ಕರ್ನಾಟಕ ಸ್ಟಾಂಪ್‌ ವಿಧೇಯಕವನ್ನು ಕಂದಾಯ ಸಚಿವ ಆರ್.‌ಅಶೋಕ್‌ ಮಂಡಿಸಿದ್ರು. ಈ ನಡುವೆ ಕಾಂಗ್ರೆಸ್‌ ನಾಯಕರ ಧರಣಿ ತಾರಕಕ್ಕೇರಿದೆ. ನ್ಯಾಯ ಸಿಗುವವರೆಗೆ ನಾವು ಧರಣಿ ನಿಲ್ಲಿಸುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ. ಇತ್ತ ಕಾಂಗ್ರೆಸ್‌ ನಾಯಕರ ಮನವೊಲಿಸಲು ಸಭಾಪತಿ ಕಾಗೇರಿಯವರು ಶತ ಪ್ರಯತ್ನ ಮಾಡ್ತಿದಾರೆ.
ಜೆಡಿಎಸ್‌ ನಾಯಕರು ನಮಗೆ ಚರ್ಚೆ ಮಾಡಲು ಅವಕಾಶ ಕೊಡಿ ಎಂದು ಪಟ್ಟು ಹಿಡಿದಿದ್ದಾರೆ. ಬಂಡೆಪ್ಪ ಕಾಶೆಂಪೂರ್‌ ಅವರು ನಮಗೆ ಚರ್ಚೆಗೆ ಅವಕಾಶ ಕೊಡಿ ಸದನ ಶುರು ಆದಾಗಿನಿಂದ ನಮಗೆ ಮಾತನಾಡಲು ಅನುಮತಿ ನೀಡಿಲ್ಲ ಎಂದು ಮನವಿ ಮಾಡಿದ್ದಾರೆ. ಕೈ ನಾಯಕರ ಧರಣಿಯಿಂದಾಗಿ ವಿಧಾನಸಭೆ ಅಧಿವೇಶನ ನಾಳೆಗೆ ಸಭಾಪತಿ ಮುಂದೂಡಿದ್ರು.

 

Share Post