BengaluruPolitics

ಕಾಂಗ್ರೆಸ್‌ ಅಭ್ಯರ್ಥಿಗಳ ಆಯ್ಕೆಗೆ ಸ್ಕ್ರೀನಿಂಗ್‌ ಕಮಿಟಿ; ಮೋಹನ್‌ ಪ್ರಕಾಶ್‌ ಅಧ್ಯಕ್ಷ

ಬೆಂಗಳೂರು; ಇನ್ನೇನು ಒಂದೆರಡು ತಿಂಗಳಲ್ಲಿ ರಾಜ್ಯ ವಿಧಾನಸಭಾ ಚುನಾವಣೆ ಘೋಷಣೆಯಾಗಲಿದೆ. ಈ ಹಿನ್ನೆಲೆಯಲ್ಲಿ ಎಲ್ಲಾ ಪಕ್ಷಗಳೂ ಅಭ್ಯರ್ಥಿಗಳ ಆಯ್ಕೆ ಹಾಗೂ ಪಕ್ಷ ಸಂಘಟನೆಯಲ್ಲಿ ಬ್ಯುಸಿಯಾಗಿವೆ. ಕಾಂಗ್ರೆಸ್‌ ಈ ಬಾರಿ ಏನಾದರೂ ಮಾಡಿ ಗೆಲ್ಲಲೇಬೇಕು ಎಂದು ಪಣ ತೊಟ್ಟಿದೆ. ಕಾಂಗ್ರೆಸ್‌ ಗೆಲ್ಲುವ ಅಭ್ಯರ್ಥಿಗಳ ಆಯ್ಕೆಯಾಗಿ ಭಾರಿ ಕಸರತ್ತು ಮಾಡ್ತಿದೆ. ಇದೀಗ ಕಾಂಗ್ರೆಸ್‌ ತನ್ನ ಅಭ್ಯರ್ಥಿಗಳ ಆಯ್ಕೆಗೆ ಸ್ಕ್ರೀನಿಂಗ್ ಕಮಿಟಿ  ಪರಿಶೀಲನಾ ಸಮಿತಿ ರಚನೆ ಮಾಡಿ ಆದೇಶ ಹೊರಡಿಸಿದೆ. 

ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮೋಹನ್ ಪ್ರಕಾಶ್ ರನ್ನು ಈ ಸ್ಕ್ರೀನಿಂಗ್ ಕಮಿಟಿಗೆ ಅಧ್ಯಕ್ಷರಾಗಿ ಆಯ್ಕೆ ಮಾಡಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ  ಅನುಮೋದನೆ ನೀಡಿದ್ದಾರೆ.  ಸಂಸದರಾದ ನೀರಜ್ ದಾಂಗಿ, ಮೊಹಮ್ಮದ್ ಜಾವೇದ್ ಮತ್ತು ಸಪ್ತಗಿರಿ ಉಲಕ ಅವರು ಸ್ಕ್ರೀನಿಂಗ್ ಕಮಿಟಿ  ಸದಸ್ಯರಾಗಿದ್ದಾರೆ. ಡಿಕೆ ಶಿವಕುಮಾರ್, ಸಿದ್ದರಾಮಯ್ಯ ಸೇರಿದಂತೆ ರಾಜ್ಯದ ಹಿರಿಯ ಕಾಂಗ್ರೆಸ್ ನಾಯಕರು ಈ ಕಮಿಟಿಯ ಪದನಿಮಿತ್ತ  ಸದಸ್ಯರಾಗಿದ್ದಾರೆ.

ಕರ್ನಾಟಕ ಕಾಂಗ್ರೆಸ್ ಸ್ಕ್ರೀನಿಂಗ್ ಕಮಿಟಿ:

ಅಧ್ಯಕ್ಷ: ಮೋಹನ್ ಪ್ರಕಾಶ್

ಸದಸ್ಯರು: ನೀರಜ್ ದಾಂಗಿ, ಮೊಹಮ್ಮದ್ ಜಾವೇದ್ ಮತ್ತು ಸಪ್ತಗಿರಿ ಉಲಕ

ಪದನಿಮಿತ್ಯ ಸದಸ್ಯರು: ಸಿದ್ದರಾಮಯ್ಯ, ಡಿಕೆ ಶಿವಕುಮಾರ್, ಬಿ.ಕೆ. ಹರಿಪ್ರಸಾದ್, ಎಂ.ಬಿ. ಪಾಟೀಲ, ಡಾ. ಜಿ ಪರಮೇಶ್ವರ್, ರಂದೀಪ್ ಸುರ್ಜೆವಾಲ.

Share Post