BengaluruDistrictsPolitics

ಕಾಂಗ್ರೆಸ್‌ ಅಭ್ಯರ್ಥಿಗಳ ಪರ ರಮ್ಯಾ ಪ್ರಚಾರ; ಮೇ.4ಕ್ಕೆ ವರುಣಾದಲ್ಲಿ ಕ್ಯಾಂಪೇನ್‌

ಬೆಂಗಳೂರು; ನಟಿ ಹಾಗೂ ಮಾಜಿ ಸಂಸದೆ ರಮ್ಯಾ ಅವರು ಕಾಂಗ್ರೆಸ್‌ ಸ್ಟಾರ್‌ ಕ್ಯಾಂಪೇನರ್‌. ಅವರು ಇದೀಗ ಕಾಂಗ್ರೆಸ್‌ ಅಭ್ಯರ್ಥಿಗಳ ಪರ ಪ್ರಚಾರಕ್ಕೆ ಮುಂದಾಗಿದ್ದಾರೆ. ಮೇ 4ರಿಂದ ಅವರು ಪ್ರಚಾರ ಕೈಗೊಳ್ಳಲಿದ್ದು, ಹಲವು ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಪರವಾಗಿ ಮತಯಾಚನೆ ಮಾಡಲಿದ್ದಾರೆ.

ಮೇ 4ರಂದು ರಮ್ಯಾ ಅವರು ವರುಣಾ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಅವರ ಪರ ಮತಯಾಚನೆ ಮಾಡಲಿದ್ದಾರೆ. ನಂತರ ಮೇ 6ರಂದು ಬಬಲೇಶ್ವರದಲ್ಲಿ ಎಂ.ಬಿ.ಪಾಟೀಲ್‌ ಅವರ ಪರವಾಗಿ ಪ್ರಚಾರ ನಡೆಸಲಿದ್ದಾರೆ. ನಂತರ ಬೆಂಗಳೂರಿನ ಸರ್ವಜ್ಞ ನಗರದಲ್ಲಿ ಕೆ.ಜೆ.ಜಾರ್ಜ್ ಪರ ಪ್ರಚಾರ ಮಾಡುತ್ತಾರೆ. ಮಂಡ್ಯ ಜಿಲ್ಲೆಯ ಹಲವು ಕ್ಷೇತ್ರಗಳಲ್ಲೂ ಪ್ರಚಾರ ಮಾಡಲು ರಮ್ಯಾ ಸಿದ್ಧತೆ ನಡೆಸಿದ್ದಾರೆ.

Share Post