BengaluruPolitics

ನವರಂಗಿ ನಾರಾಯಣ, ಅಶೋಕ ಚಕ್ರವರ್ತಿ ಅಕ್ರಮ ಬಿಚ್ಚಿಡುತ್ತೇನೆ; ಡಿ.ಕೆ.ಶಿವಕುಮಾರ್

ಬೆಂಗಳೂರು; ನವರಂಗಿ ನಾರಾಯಣ, ಅಶೋಕ ಚಕ್ರವರ್ತಿ ಸೇರಿ ಎಲ್ಲರ ಅಕ್ರಮಗಳ ಬಗ್ಗೆಯೂ ನನಗೆ ಗೊತ್ತಿದೆ. ಎಲ್ಲವನ್ನೂ ಬಿಚ್ಚಿಡುತ್ತೇನೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್‌ ಹೇಳಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿರುವ ಅವರು, ಮಾಜಿ ಸಚಿವ ಅಶ್ವತ್ಥನಾರಾಯಣ ಅವರನ್ನು ನವರಂಗಿ ನಾರಾಯಣ ಎಂದು ಕರೆದಿದ್ದಾರೆ.

ನವರಂಗಿ ನಾರಾಯಣ, ಅಶೋಕ ಚಕ್ರವರ್ತಿ ಸೇರಿ ಎಲ್ಲರ ವಿಚಾರವೂ ನನಗೆ ಚೆನ್ನಾಗಿ ಗೊತ್ತಿದೆ. ಶಾರ್ಕ್ ನಂತರ ಶಾಸಕರು ಕಾಮಗಾರಿಯನ್ನೇ ಮಾಡದೆ ಬಿಲ್‌ ಕೇಳುತ್ತಿದ್ದಾರೆ. ದಾಖಲೆಗಳನ್ನೆಲ್ಲಾ ಒಮ್ಮೆಗೆ ಬಿಚ್ಚಿಟ್ಟರೆ ಅರಗಿಸಿಕೊಳ್ಳೋದಕ್ಕೆ ಅವರಿಗೆ ಕಷ್ಟವಾಗುತ್ತದೆ. ಸತ್ಯ ಶೋಧನೆ ವರದಿ ಮೊದಲು ಬರಲಿ. ನಂತರ ಎಲ್ಲವನ್ನೂ ಬಹಿರಂಗ ಮಾಡುತ್ತೇವೆ ಎಂದು ಡಿ.ಕೆ.ಶಿವಕುಮಾರ್‌ ಹೇಳಿದರು.

ಬಿಬಿಎಂಪಿ ಗುತ್ತಿಗೆದಾರರು ನೋವಿನಲ್ಲಿದ್ದಾರೆ. ಅವರ ಬಗ್ಗೆ ನಾನು ಮಾತನಾಡುವುದಿಲ್ಲ. ಗುತ್ತಿಗೆದಾರರು ತಮ್ಮ ಹೇಳಿಕೆಗಳನ್ನು ಹಿಂಪಡೆದಿದ್ದಾರೆ. ಆದರೆ ಅವರನ್ನು ಬಳಸಿಕೊಂಡ ಅಶೋಕ ಚಕ್ರವರ್ತಿ, ನವರಂಗಿ ನಾರಾಯಣ, ಸಿ.ಟಿ. ರವಿ, ಗೋಪಾಲಯ್ಯ ಮುಂತಾದವರು ಮೊದಲು ಉತ್ತರ ನೀಡಲಿ ಎಂದಿದ್ದಾರೆ.

ಬಿಜೆಪಿ ನಾಯಕರ ಅಕ್ರಮಗಳ ಬಗ್ಗೆ ದಾಖಲೆಗಳು ಇದೆಯೋ ಇಲ್ಲವೋ ಎಲ್ಲವೂ ಗೊತ್ತಾಗುತ್ತದೆ. ನಮ್ಮ ಅಜ್ಜಯ್ಯನ ಸಹವಾಸ ಏನು ಎಂದು ಅವರಿಗೆಲ್ಲಾ ಗೊತ್ತಿಲ್ಲ. ನಾನೀಗ ತಕ್ಷಣಕ್ಕೆ ಉತ್ತರ ನೀಡಲು ಹೋಗಲ್ಲ. ಯಾರಾರ‍ಯರು ಏನೇನು ಮಾಡಿದ್ದಾರೆ ಎಂಬುದೆಲ್ಲಾ ಗೊತ್ತಿದೆ. ಎಲ್ಲವನ್ನೂ ಬಿಚ್ಚಿಡುತ್ತೇವೆ ಎಂದು ಹೇಳಿದರು.

Share Post