Bengaluru

ರಷ್ಯಾ ಬಾಂಬ್‌ ದಾಳಿಗೆ ಮೃತಪಟ್ಟ ವಿದ್ಯಾರ್ಥಿ ನವೀನ್‌ ಮೃತದೇಹ ಭಾನುವಾರ ಬೆಂಗಳೂರಿಗೆ: ಸಿಎಂ ಮಾಹಿತಿ

ಬೆಂಗಳೂರು: ಶಿವರಾತ್ರಿ ಹಬ್ಬದಂದು ನವೀನ್‌ ಮನೆಯಲ್ಲಿ ಸೂತಕದ ವಾತಾವರಣ ಮನೆ ಮಾಡಿತ್ತು. ಉಕ್ರೇನ್‌ ರಷ್ಯಾ ದಾಳಿಯಲ್ಲಿ ಶೆಲ್‌ ದಾಳಿಯಿಂದಾಗಿ ರಾಜ್ಯದ ವಿದ್ಯಾರ್ಥಿ ನವೀನ್‌ ಮೃತಪಟ್ಟಿದ್ರು. ಇದುವರೆಗೂ ನವೀನ್‌ ಮೃತದೇಹ ಭಾರತಕ್ಕೆ ಬಂದಿಲ್ಲ. ಭಾನುವಾರ ಬೆಳಗಿನ ಜಾವ 3ಗಂಟೆಗೆ ನವೀನ್‌ ಪಾರ್ಥಿವ ಶರೀರ ಬೆಂಗಳೂರಿಗೆ ಬರುವುದಾಗಿ ಮುಖ್ಯಮಂತ್ರಿ ಬಸವರಾಜ್‌ ಬೊಮ್ಮಾಯಿಯವರು ತಿಳಿಸಿದ್ರು. ಕಳೆದ 21  ದಿನಗಳಿಂದ ನವೀನ್‌ ಪಾರ್ಥಿವ ಶರೀರವನ್ನು ಭಾರತಕ್ಕೆ ಕರೆತರಲು ನಡೆಸಿದ ಎಲ್ಲಾ ಪ್ರಯತ್ನಗಳು ಸಫಲವಾಗಿವೆ. ಸತತ ಪ್ರಯತ್ನದೊಂದಿಗೆ ಅಂತೂ ಭಾನುವಾರ ಮೃತದೇಹ ಬರಲಿದೆ.

ಮೃತದೇಹ ಮೆಡಿಕಲ್‌ ಕಾಲೇಜಿಗೆ ದಾನ

ಇನ್ನೂ ಮಗನ ಮೃತದೇಹ ಹಾವೇರಿಯ ಚಳಗೇರಿ ಗ್ರಾಮಕ್ಕೆ ಬಂದಕೂಡಲೇ ನವೀನ್‌ ಗ್ಯಾನಗೌಡರ್‌ ಮನೆಯಲ್ಲಿ ಪಾರ್ಥಿವ ಶರೀರಕ್ಕೆ ಪೂಜೆ ಸಲ್ಲಿಸಿ ಮೃತದೇಹವನ್ನು ದಾವಣೆಗೆರೆಯ ಎಸ್‌ಎಸ್‌ ಮೆಡಿಕಲ್‌ ಕಾಲೇಜಿಗೆ ದಾನ ಮಾಡುವುದಾಗಿ ನವೀನ್‌ ಪೋಷಕರು ತಿಳಿಸಿದ್ದಾರೆ. ನಮ್ಮ ಮಗನ ಮೃತದೇಹ ನಮಗೆ ಸಿಗುತ್ತೊ ಇಲ್ಲವೋ ಎಂದು ಅನುಮಾನ ಇತ್ತು. ಆದರೆ ಛಲಬಿಡದೆ ಪಾರ್ಥಿವ ಶರೀರ ತರಲು ಪ್ರಯತ್ನ ಪಟ್ಟ ಎಲ್ಲರಿಗೂ ನಾನು ಧನ್ಯವಾದಗಳನ್ನು ಅರ್ಪಿಸುತ್ತಿದ್ದೇನೆ ಎಂದು ನವೀನ್‌ ತಂದೆ ತಿಳಿಸಿದ್ದಾರೆ. ಅಂತೂ ಹೆತ್ತವರ ಮೊರೆ ದೇವರಿಗೆ ಕೇಳಿಸುತ್ತೆ ಅನಿಸುತ್ತೆ ಕೊನೆಯದಾಗಿ ಮಗನ ಪಾರ್ಥಿವ ಶರೀರ ಅವರ ಮನೆಗೆ ತಲುಪಲಿದೆ. ಭಾನುವಾರ ಬೆಳಗಿನ ಜಾವ ಬೆಂಗಳೂರಿಗೆ ಬರುತ್ತಿದ್ದಂತೆ ಚಳಗೇರಿ ಗ್ರಾಮಕ್ಕೆ ತಲುಪಿಸುವ ವ್ಯವಸ್ಥೆ ಮಾಡಲಾಗುವುದು ಎಂದು ಸಿಎಂ ತಿಳಿಸಿದ್ರು.

Share Post