ಕೆಲವೇ ದಿನಗಳಲ್ಲಿ ಕೆ.ಆರ್.ಪುರಂ-ವೈಟ್ಫೀಲ್ಡ್ ನಡುವಿನ ಮೆಟ್ರೋ ಆರಂಭ
ಬೆಂಗಳೂರು; ಕೆ.ಆರ್.ಪುರಂ ಮತ್ತು ವೈಟ್ಫಿಲ್ಡ್ ನಡುವಿನ ಮೆಟ್ರೋ ಸಂಚಾರ ಶೀಘ್ರದಲ್ಲೇ ಶುರುವಾಗಲಿದೆ. ಶನಿವಾರ ಈ ಮಾರ್ಗದಲ್ಲಿ ಪ್ರಾಯೋಗಿಕ ಪರೀಕ್ಷೆ ನಡೆಯಲಿದೆ. ಅನಂತರ ಕೆಲ ದಿನಗಳಲ್ಲೇ ಸಂಚಾರಕ್ಕೆ ಈ ಮಾರ್ಗ ಮುಕ್ತವಾಗಲಿದೆ.
12.75 ಕಿ.ಮೀ ಉದ್ದದ ಈ ಮಾರ್ಗದಲ್ಲಿ ಎಲ್ಲಾ ಕೆಲಸಗಳು ಮುಗಿದಿವೆ. ಪ್ರಾಯೋಗಿಕ ಸಂಚಾರಗಳು ಕೂಡ ಈಗಾಗಲೇ ಮೂರು ಹಂತದಲ್ಲಿ ಮುಕ್ತಾಯವಾಗಿದೆ. ಕೊನೆಯ ಹಂತದ ಪ್ರಯೋಗಿಕ ಪರೀಕ್ಷೆ ಫೆಬ್ರವರಿ 11ರಂದು ನಡೆಯಲಿದೆ. 90 ಕಿ.ಮೀ ವೇಗದಲ್ಲಿ 5 ಟ್ರೈನ್ಗಳು ಸಂಚಾರ ಮಾಡಲಿವೆ.