ಮಂಡ್ಯ ಅಳಿಯನಾಗ್ತಿದ್ದಾನೆ ಒಳ್ಳೆ ಹುಡುಗ ಪ್ರಥಮ್; ಯಾವಾಗ ಮದುವೆ ಗೊತ್ತಾ..?
ಬೆಂಗಳೂರು; ಬಿಗ್ ಬಾಸ್ ಖ್ಯಾತಿಯ ಒಳ್ಳೆ ಹುಡುಗ ಪ್ರಥಮ್ ಮದುವೆಯಾಗ್ತಿದ್ದಾನೆ. ಮೊದಲೇ ಹೇಳಿಕೊಂಡಂತೆ ಹಳ್ಳಿಯ ಸಂಪ್ರದಾಯಸ್ಥ ಬಡ ಹುಡುಗಿಯನ್ನು ಪ್ರಥಮ್ ಮದುವೆಯಾಗುತ್ತಿದ್ದಾನೆ. ಮಂಡ್ಯ ಸಮೀಪದ ಗ್ರಾಮವೊಂದರ ಭಾನುಶ್ರೀ ಎಂಬ ಯುವತಿಯ ಜೊತೆ ಪ್ರಥಮ್‌ಗೆ ಎಂಗೇಜ್‌ಮೆಂಟ್ ಕೂಡಾ ಆಗಿದೆ.
ನಿನ್ನೆ ಸಂಜೆ ಮಂಡ್ಯ ಪಕ್ಕದ ಹಳ್ಳಿಯಲ್ಲಿ ಸರಳವಾಗಿ ಎಂಗೇಜ್‌ಮೆಂಟ್ ಕಾರ್ಯಕ್ರಮ ನಡೆದಿದೆ. ವಧು ಭಾನುಶ್ರೀ ಡಿಗ್ರಿ ಮುಗಿಸಿ ಡಬಲ್ ಡಿಗ್ರಿ ಮಾಡೋಕೆ ಸಿದ್ಧತೆ ಮಾಡಿದ್ದಾಳೆ. ಶೀಘ್ರದಲ್ಲೇ ಇಬ್ಬರು ಮದುವೆ ನಡೆಯಲಿದೆ.