BengaluruPolitics

ಮಾಡಾಳ್‌ ಅರೆಸ್ಟ್‌ ಬಿಜೆಪಿ ಭ್ರಷ್ಟಾಚಾರಕ್ಕೆ ಸಿಕ್ಕಿರುವ ಆಸ್ಕರ್ ಅವಾರ್ಡ್‌; ಕಾಂಗ್ರೆಸ್‌

ಬೆಂಗಳೂರು; ಲಂಚ ಸ್ವೀಕಾರ ಪ್ರಕರಣದಲ್ಲಿ ಬಿಜೆಪಿ ಶಾಸಕ ಮಾಡಾಳು ವಿರೂಪಾಕ್ಷಪ್ಪ ಅರೆಸ್ಟ್‌ ಆಗಿದ್ದಾರೆ. ಈ ಸಂಬಂಧ ಕಾಂಗ್ರೆಸ್‌ ಟ್ವೀಟ್‌ ಮಾಡಿದೆ. ಇದು ಬಿಜೆಪಿ ಸರ್ಕಾರದ ಭ್ರಷ್ಟಾಚಾರಕ್ಕೆ ಸಿಕ್ಕಿರುವ ಆಸ್ಕರ್ ಅವಾರ್ಡಿನಂತೆ! ಎಂದು ಲೇವಡಿ ಮಾಡಿದೆ. ಕಾಂಗ್ರೆಸ್‌ ಮಾಡಿರುವ ಟ್ವೀಟ್‌ಗಳ ವಿವರ ಇಲ್ಲಿದೆ. 

ಟ್ವೀಟ್‌-೧

ಮಾಡಾಳ್ ವೀರೂಪಾಕ್ಷಪ್ಪರ ಬಂಧನ ಬಿಜೆಪಿ ಸರ್ಕಾರದ ಭ್ರಷ್ಟಾಚಾರಕ್ಕೆ ಸಿಕ್ಕಿರುವ ಆಸ್ಕರ್ ಅವಾರ್ಡಿನಂತೆ! #40percentsarkara ಭ್ರಷ್ಟರ ರಕ್ಷಣೆಯ ಪ್ರಯತ್ನದ ಹೊರತಾಗಿಯೂ ಈ ಬಂಧನವಾಗಿದ್ದು ಬಿಜೆಪಿಯ ಭ್ರಷ್ಟಾಚಾರದ ಪಾಪದ ಕೊಡ ತುಂಬಿರುವುದಕ್ಕೆ ಸಾಕ್ಷಿ. ಇಂಥಹ ಕಡುಭ್ರಷ್ಟ ಬಿಜೆಪಿಗೆ ಮತ ಕೇಳಲು ಜನರ ಮುಂದೆ ಹೋಗಲು ಯಾವುದೇ ನೈತಿಕ ಹಕ್ಕೂ ಇಲ್ಲ

ಟ್ವೀಟ್‌-೨;

ಬಿಜೆಪಿಯ ಹಿಂದಿನ ಅಧಿಕಾರವಧಿಯಲ್ಲಿ ಸಿಎಂ ಸೇರಿ ಸಾಲು ಸಾಲಾಗಿ ಬಿಜೆಪಿಗರು ಪರಪ್ಪನ ಅಗ್ರಹಾರಕ್ಕೆ ಅತಿಥಿಗಳಾಗಿದ್ದರು. ಈಗ ಮಾಡಾಳ್‌ರಿಂದ ಮತ್ತೆ ಬಿಜೆಪಿಯ ಜೈಲು ಪರ್ವ ಶುರುವಾಗಿದೆ. ಕಾಕಂಬಿ ಹಗರಣದ ಪ್ರಾಮಾಣಿಕ ತನಿಖೆ ನಡೆದರೆ ಮಾಡಾಳ್‌ರಿಗೆ ಸಿಎಂ @BSBommai  ಅವರೂ ಜೈಲಿನ ಸಂಗಾತಿಯಾಗಿ ಹೋಗಬೇಕಾಗುತ್ತದೆ! #40PercentSarkara

Share Post