ಬಜೆಟ್ ಮಂಡನೆಗೆ ಕ್ಷಣಗಣನೆ; ಕೆಲವೇ ಕ್ಷಣಗಳಲ್ಲಿ ಸಂಪುಟ ಸಭೆ
ಬೆಂಗಳೂರು; ಸಿಎಂ ಬಸವರಾಜ ಬೊಮ್ಮಾಯಿಯವರು ಇಂದು ತಮ್ಮ ಚೊಚ್ಚಲ ಬಜೆಟ್ ಮಂಡಿಸುತ್ತಿದ್ದಾರೆ. ಮಧ್ಯಾಹ್ನ 12.30ಕ್ಕೆ ಬಜೆಟ್ ಮಂಡನೆ ಶುರುವಾಗುತ್ತದೆ. ಅದಕ್ಕೂ ಮೊದಲು ಸಂಪುಟ ಸಭೆ ನಡೆಯಲಿದೆ. 12.10ಕ್ಕೆ ಸಂಪುಟ ಸಭೆ ನಡೆಯಲಿದ್ದು, ಅಲ್ಲಿ ಬಜೆಟ್‌ಗೆ ಅನುಮೋದನೆ ಪಡೆಯಲಾಗುತ್ತದೆ. ಅನಂತರ ಬಜೆಟ್ ಮಂಡನೆ ಶುರುವಾಗಲಿವೆ.
ಇನ್ನು ಬಜೆಟ್ ಪ್ರತಿಗಳು ಈಗಾಗಲೇ ವಿಧಾನಸೌಧ ತಲುಪಿವೆ. ಇನ್ನು ಸಿಎಂ ಬೊಮ್ಮಾಯಿ ಕುಟುಂಬದ ಸದಸ್ಯರು ಕೂಡಾ ವಿಧಾನಸೌಧ ತಲುಪಿಸಿದ್ದಾರೆ. ಮುಂದಿನ ವರ್ಷ ವಿಧಾನಸಭಾ ಚುನಾವಣೆ ಇದೆ. ಜೊತೆಗೆ ಬಿಬಿಎಂಪಿ ಚುನಾವಣೆ ಹತ್ತಿರದಲ್ಲಿದೆ. ಈ ಹಿನ್ನೆಲೆಯಲ್ಲಿ ಈ ಬಜೆಟ್ ಯಾವ ರೀತಿ ಇರಲಿದೆ ಎಂಬುದು ಕುತೂಹಲಕ್ಕೆ ಕಾರಣವಾಗಿದೆ.
ಇನ್ನು ಇದಕ್ಕೂ ಮೊದಲು ಮುಖ್ಯಮಂತ್ರಿ ಬೊಮ್ಮಾಯಿ ಅವರನ್ನು ಆರ್ಥಿಕ ಇಲಾಖೆ ಅಧಿಕಾರಿಗಳು ಭೇಟಿಯಾಗಿ 2022-23ನೇ ಸಾಲಿನ ಆಯವ್ಯಯ ಹಸ್ತಾಂತರಿಸಿದರು. ಸಚಿವರಾದ ಗೋವಿಂದ ಎಂ. ಕಾರಜೋಳ, ಸಿ.ಸಿ. ಪಾಟೀಲ, ಬಿ. ಎ. ಬಸವರಾಜ, ಆರ್ಥಿಕ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಐ.ಎಸ್. ಎನ್. ಪ್ರಸಾದ್ ಹಾಜರಿದ್ದರು.