Bengaluru

Karnataka Bandh; ವಿಮಾನಗಳಿಗೂ ತಟ್ಟಿದ ಬಂದ್‌ ಬಿಸಿ – 44 ವಿಮಾನ ಕ್ಯಾನ್ಸಲ್‌

ಬೆಂಗಳೂರು; ಕರ್ನಾಟಕ ಬಂದ್‌ ಬಿಸಿ ವಿಮಾನಗಳಿಗೂ ತಟ್ಟಿದೆ. ಬಂದ್‌ ಹಿನ್ನೆಲೆಯಲ್ಲಿ ಪ್ರಯಾಣಿಕರ ಸಂಖ್ಯೆ ಬಹುತೇಕ ಕಡಿಮೆಯಾಗಿದೆ. ಹೀಗಾಗಿ ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಟೇಕಾಫ್‌ ಆಗಬೇಕಿದ್ದ 44 ವಿಮಾನಗಳು ಕ್ಯಾನ್ಸಲ್‌ ಆಗಿವೆ. 

ಬೆಂಗಳೂರಿಗೆ ಆಗಮಿಸುವ ಹಾಗೂ ಹೊರಡುವ ವಿಮಾನಗಳು ಕೂಡಾ ಕ್ಯಾನ್ಸಲ್‌ ಆಗಿವೆ. ಬೇರೆ ನಗರಗಳಿಂದ ಬಂದರೂ ಬೆಂಗಳೂರು ನಗರಕ್ಕೆ ತೆರಳಲು ವಾಹನಗಳ ವ್ಯವಸ್ಥೆ ಇರುವುದಿಲ್ಲ. ಹೀಗಾಗಿ, ಬೇರೆ ನಗರಗಳಿಂದ ಬರುವವರು ಕೂಡಾ ಕ್ಯಾನ್ಸಲ್‌ ಮಾಡಿಕೊಂಡಿದ್ದಾರೆ. ಹೀಗಾಗಿ ವಿಮಾನಗಳ ಹಾರಾಟ ಇಂದು ಕಡಿಮೆಯಾಗಿದೆ.

ದೆಹಲಿ, ಮುಂಬೈ, ಕೊಲ್ಕತ್ತಾ ಮಂಗಳೂರು ಸೇರಿದಂತೆ ವಿವಿದೆಡೆಯಿಂದ ಬೆಂಗಳೂರಿಗೆ ಬರಬೇಕಿದ್ದ 22 ವಿಮಾನಗಳು ರದ್ದಾಗಿದ್ದು, ಇಲ್ಲಿಂದ ಟೇಕಾಫ್‌ ಆಗಬೇಕಿದ್ದ 22 ವಿಮಾನಗಳು ರದ್ದಾಗಿವೆ.

ಇನ್ನು ವಿಮಾನ ನಿಲ್ದಾಣದ ಬಳಿ ಕೂಡಾ ಪ್ರತಿಭಟನಾಕಾರರು ಘೊಷಣೆಗಳನ್ನು ಕೂಗಿದ್ದಾರೆ. ಐವರು ಪ್ರತಿಭಟನಾಕಾರರು ಟಿಕೆಟ್‌ ಬುಕ್‌ ಮಾಡಿಕೊಂಡು ವಿಮಾನ ನಿಲ್ದಾಣದೊಳಗೆ ಹೋಗಿ ಘೋಷಣೆಗಳನ್ನು ಕೂಗಿದ್ದಾರೆ. ಅವರನ್ನು ಬಂಧಿಸಲಾಗಿದೆ.

Share Post