BengaluruPolitics

ಅಡ್ಡ ಮತದಾನ ಮಾಡಿದ ಜೆಡಿಎಸ್‌ ಶಾಸಕ ಶ್ರೀನಿವಾಸ ಗೌಡ

ಬೆಂಗಳೂರು; ರಾಜ್ಯಸಭಾ ಚುನಾವಣೆಯಲ್ಲಿ ಮೊದಲ ಅಡ್ಡ ಮತದಾನ ನಡೆದಿದೆ. ಕೋಲಾರ ಕ್ಷೇತ್ರದ ಜೆಡಿಎಸ್ ಶಾಸಕ ಶ್ರೀನಿವಾಸ ಗೌಡ ಕಾಂಗ್ರೆಸ್ ಅಭ್ಯರ್ಥಿಗೆ ಮತ ಹಾಕಿದ್ದಾರೆ ಎನ್ನಲಾಗಿದೆ.

ಜೆಡಿಎಸ್‌ನ ಕೆಲ ಶಾಸಕರು ಅಡ್ಡ ಮತದಾನ ಮಾಡುತ್ತಾರೆ ಎಂಬ ಮಾತುಗಳು ಕೇಳಿಬಂದಿದ್ದವು. ಕುಮಾರಸ್ವಾಮಿ ಮತ್ತು ಸಿಎಂ ಇಬ್ರಾಹಿಂ ಅವರು ಬೆಳಗ್ಗೆಯೇ ಶ್ರೀನಿವಾಸ ಗೌಡರನ್ನು ಕಾಂಗ್ರೆಸ್ ನಾಯಕರು ಭೇಟಿ ಮಾಡಿದ್ದಾರೆ ಎಂದು ಆರೋಪಿಸಿದ್ದರು. ಯಾಕೆಂದರೆ, ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅವರು ಇಂದು ಬೆಳಗ್ಗೆ ಶ್ರೀನಿವಾಸ ಗೌಡರ ಮನೆಗೆ ಹೋಗಿ ಕೊನೆಯ ಹಂತದ ಮಾತುಕತೆ ನಡೆಸಿದ್ದರು.

ಮತದಾನಕ್ಕೂ ಮೊದಲು ನಾನು ಯಾರಿಗೆ ಮತ ಹಾಕುತ್ತೇನೆ ಎನ್ನುವುದನ್ನು ಈಗ ತಿಳಿಸುವುದಿಲ್ಲ ಎಂದಿದ್ದ ಶಾಸಕ ಶ್ರೀನಿವಾಸ ಗೌಡ ಮತ ಹಾಕಿದ ಬಳಿಕ ನೇರವಾಗಿ ಕಾಂಗ್ರೆಸ್ ಶಾಸಕರಿದ್ದ ಕಚೇರಿಗೆ ತೆರಳಿದರು.

 

Share Post