ಜೈನ ಮುನಿ ಹತ್ಯೆ ಪ್ರಕರಣ ಸಿಬಿಐ ವಹಿಸಲು ಆಗ್ರಹ; ನಿರಾಕರಿಸಿದ ಸರ್ಕಾರ
ಬೆಂಗಳೂರು; ಬೆಳಗಾವಿಯ ಜೈನಮುನಿ ಕೊಲೆ ಪ್ರಕರಣವನ್ನು ಸಿಬಿಐಗೆ ವಹಿಸುವಂತೆ ಬಿಜೆಪಿ ಸದಸ್ಯ ಆಗ್ರಹಿಸಿದ್ದಾರೆ. ಈ ವಿಚಾರವಾಗಿ ವಿಧಾನ ಪರಿಷತ್‍ನಲ್ಲಿ ಬಿಸಿಬಿಸಿ ಚರ್ಚೆ ನಡೆಯಿತು. ಕೋಟಾ ಶ್ರೀನಿವಾಸ ಪೂಜಾರಿ ಸೇರಿದಂತೆ ಹಲವು ಬಿಜೆಪಿ ಸದಸ್ಯರು ಪ್ರಕರಣವನ್ನು ಸಿಬಿಐಗೆ ನೀಡುವಂತೆ ಒತ್ತಾಯಿಸಿದರು. ಆದ್ರೆ ಸರ್ಕಾರಕ್ಕೆ ಅದಕ್ಕೆ ನಿರಾಕರಿಸಿತು.
ಜೈನ ಮುನಿ ಕೊಲೆ ಕೇಸ್ ರಾಜ್ಯದ ಜರನ್ನು ತಲ್ಲಣಗೊಳಿಸಿದೆ. ಅಹಿಂಸೆ ಧರ್ಮ ಎಂದು ಹೇಳುವವರನ್ನೇ ಕೊಲೆ ಮಾಡಲಾಗಿದೆ. ಅದೂ ಕೂಡಾ ವಿದ್ಯುತ್ ಶಾಕ್ ಕೊಟ್ಟು ಚಿತ್ರಹಿಂಸೆ ಮಾಡಲಾಗಿದೆ. ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಬೇಕು. ಪ್ರಕರಣವನ್ನು ಸಿಬಿಐಗೆ ವಹಿಸಬೇಕೆಂದು ಪರಿಷತ್ ಸದಸ್ಯ ಕೋಟಾ ಶ್ರೀನಿವಾಸ ಪೂಜಾರಿ ಆಗ್ರಹ ಮಾಡಿದ್ದಾರೆ. ಆದ್ರೆ ಇದಕ್ಕೆ ಸರ್ಕಾರ ಒಪ್ಪಿಲ್ಲ. ಈ ವಿಚಾರದಲ್ಲಿ ರಾಜಕೀಯ ಮಾಡುವುದು ಸರಿಯಲ್ಲ. ರಾಜ್ಯ ಪೊಲೀಸರೇ ಸಮರ್ಥರಿದ್ದಾರೆ. ಘಟನೆ ನಡೆದ ಕೆಲವೇ ಗಂಟೆಗಳಲ್ಲಿ ಆರೋಪಿಗಳನ್ನು ಬಂಧಿಸಿದ್ದಾರೆ. ಅವರೇ ತನಿಖೆ ನಡೆಸುತ್ತಾರೆ ಎಂದು ಸರ್ಕಾರ ತಿಳಿಸಿದೆ.