BengaluruHealth

ರಾಜ್ಯದಲ್ಲಿ ಮದ್ರಾಸ್‌ ಐ ರೋಗ ಹೆಚ್ಚಳ; ಆರೋಗ್ಯ ಇಲಾಖೆಯಿಂದ ಮಾರ್ಗಸೂಚಿ ಪ್ರಕಟ

ಬೆಂಗಳೂರು; ರಾಜ್ಯದಲ್ಲಿ ಮದ್ರಾಸ್‌ ಐ ಕಾಯಿಲೆ ಹೆಚ್ಚಾಗುತ್ತಿದೆ. ಕಣ್ಣು ಕೆಂಪಗಾಗುವುದು, ಸತತವಾಗಿ ಕಣ್ಣಿನ ನೋವು ಕಾಣಿಸಿಕೊಳ್ಳುತ್ತಿದೆ. ಅದರಲ್ಲೂ ಮಕ್ಕಳಲ್ಲಿ ಹೆಚ್ಚಾಗಿ ಈ ರೋಗ ಲಕ್ಷಣಗಳು ಕಾಣಿಸಿಕೊಳ್ಳುತ್ತಿವೆ. ಈ ಹಿನ್ನೆಲೆಯಲ್ಲಿ ಪೋಷಕರು ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಲು ಹಿಂದೇಟು ಹಾಕುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ಇದರ ಬಗ್ಗೆ ಮಾರ್ಗಸೂಚಿ ಹೊರಡಿಸಿದೆ. ಅಗತ್ಯ ಮುಂಜಾಗ್ರತೆಗಳನ್ನು ಕೈಗೊಳ್ಳುವಂತೆ ಸೂಚಿಸಲಾಗಿದೆ.
ಮದ್ರಾಸ್‌ ಐ ಬಂದಾಗ ಕಣ್ಣು ಕೆಂಪಗಾಗುತ್ತದೆ. ಊದಿಕೊಂಡಂತೆ ಕಾಣಿಸುತ್ತದೆ. ಕಣ್ಣಿನಲ್ಲಿ ಜಾಸ್ತಿ ನೀರು ಸೋರುತ್ತಿರುತ್ತದೆ. ಕಣ್ಣು ನೋವು, ಕಣ್ಣು ಚುಚ್ಚಿದಂತೆ ಆಗುವುದು, ಸೂರ್ಯ ಅಥವಾ ಬೆಳಕನ್ನು ನೋಡದಕ್ಕೂ ಸಾಧ್ಯವಾಗುವುದಿಲ್ಲ, ಜೊತೆಗೆ ದೃಷ್ಟಿ ಕೂಡಾ ಮಂಜಾಗುತ್ತದೆ. ಈ ಲಕ್ಷಣಗಳಿದ್ದ ಎಚ್ಚರಿಕೆ ವಹಿಸಬೇಕಾಗುತ್ತದೆ. ಇದು ಒಬ್ಬರಿಂದ ಒಬ್ಬರಿಗೆ ಹರಡುವುದರಿಂದ ಎಚ್ಚರಿಕೆ ವಹಿಸುವುದು ಉತ್ತಮ.

ಸ್ವಚ್ಛತೆಗೆ ಹೆಚ್ಚು ಒತ್ತು ನೀಡಬೇಕು. ಸೋಂಕು ಇರುವ ವ್ಯಕ್ತಿಯ ಕಣ್ಣನ್ನು ಆರೋಗ್ಯವಂತ ವ್ಯಕ್ತಿ ನೇರವಾಗಿ ನೋಡಬಾರದು. ಸೋಂಕು ಹೊಂದಿರುವ ವ್ಯಕ್ತಿಯಿಂದ ದೂರವೇ ಉಳಿಯಬೇಕು. ಈ ರೋಗ ಇರುವ ವ್ಯಕ್ತಿ ಬಳಸುವ ಕರವಸ್ತ್ರ, ಇತರ ವಸ್ತುಗಳನ್ನು ಕೂಡಾ ಬಳಸಬಾರದು. ಆಗಾಗ ಸೋಪು ಬಳಸಿ ಕೈಗಳನ್ನು ತೊಳೆಯಬೇಕು. ಸೋಂಕು ಹೆಚ್ಚಾದರೆ ನೇತ್ರ ತಜ್ಞರನ್ನು ಸಂಪರ್ಕಿಸಬೇಕು. ಜ್ವರ ಕೆಮ್ಮು, ಕಾಣಿಸಿಕೊಂಡರೂ ವೈದ್ಯರನ್ನು ಕಾಣುವುದು ಉತ್ತಮ.

 

Share Post