BengaluruPolitics

ಆದಾಯ ತೆರಿಗೆ ವೆಬ್‌ಸೈಟ್‌ ಹ್ಯಾಕ್‌; ಎಗರಿಸಿದ್ದು ಎಷ್ಟು ಕೋಟಿ ಗೊತ್ತಾ..?

ಬೆಂಗಳೂರು; ರಾಜ್ಯದಲ್ಲಿ ಅತಿದೊಡ್ಡ ಸೈಬರ್‌ ವಂಚನೆ ನಡೆದಿದ್ದು, ಸರ್ಕಾರಿ ವೆಬ್‌ಸೈಟ್‌ಗೇ ಕನ್ನ ಹಾಕಿ ಕೋಟಿ ಕೋಟಿ ದೋಚಿದ್ದ ಆರೋಪಿಯನ್ನು ಬಂಧಿಸುವಲ್ಲಿ ಸಿಐಡಿ ಪೊಲೀಸರು ಯಶಸ್ವಿಯಾಗಿದ್ದಾರೆ. ಸಿಐಡಿ ಎಸ್‌ಪಿ ಎಂ.ಡಿ.ಶರತ್‌ ನೇತೃತ್ವದ ತಂಡ ಈ ಕಾರ್ಯಾಚರಣೆ ನಡೆಸಿದ್ದು, ದಿಲೀಪ್‌ ರಾಜೇಗೌಡ ಎಂಬ ಹ್ಯಾಕರ್‌ನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಆದಾಯ ತೆರಿಗೆ ಇಲಾಖೆಯಲ್ಲಿ ಲೋಪ ಇತ್ತು. ಅದನ್ನು ಕಂಡುಹಿಡಿದಿದ್ದ ಆರೋಪಿ ದಿಲೀಪ್‌ ತೆರಿಗೆದಾರರಿಗೆ ಸಲ್ಲಿಕೆಯಾಗಬೇಕಿದ್ದ ರೀಫಂಡ್‌ ಹಣವನ್ನು ತನ್ನ ಖಾತೆಗೆ ಜಮೆ ಮಾಡಿಕೊಳ್ಳುತ್ತಿದ್ದ. ಇದುವರೆಗೆ ಆತ ಬರೋಬ್ಬರಿ 1 ಕೋಟಿ 41 ಲಕ್ಷ 83 ಸಾವಿರದ 360 ರೂಪಾಯಿ ವಂಚನೆ ಮಾಡಿದ್ದಾರೆ. ವಿಷಯ ತಿಳಿದು ಕಾರ್ಯಾಚರಣೆಗಿಳಿದ ಸಿಐಡಿ ಅಧಿಕಾರಿಗಳು ಆರೋಪಿಯ ಹೆಡೆಮುರಿ ಕಟ್ಟಿದ್ದಾರೆ.

ಆರೋಪಿ ಈ ಹಿಂದೆ ಇಂತಹ ಹಲವು ಪ್ರಕರಣಗಳಲ್ಲಿ ಭಾಗಿಯಾಗಿದ್ದ ಎನ್ನಲಾಗಿದೆ. ಈ ಹಿಂದೆ ಇದೇ ರೀತಿ ಹ್ಯಾಕ್‌ ಮಾಡಿ 3 ಕೋಟಿ 60 ಲಕ್ಷ ರೂಪಾಯಿಯನ್ನು ತನ್ನ ಖಾತೆಗೆ ವರ್ಗಾವಣೆ ಮಾಡಿಕೊಂಡಿದ್ದ. ಬಜಾಜ್‌ ಕಂಪನಿಗೆ ನಕಲಿ ದಾಖಲೆ ನೀಡಿ ಲೋನ್‌ ಪಡೆದು ವಂಚನೆ ಮಾಡಿರುವ ಆರೋಪ ಕೂಡಾ ದಿಲೀಪ್‌ ಮೇಲಿದೆ. ಆರೋಪಿ ಹಾಸನ ಜಿಲ್ಲೆ ಹಿರಿಸಾವೆಯವನಾಗಿದ್ದು, ಎಂಜಿನಿಯರಿಂಗ್‌ ಪಡೆದಿದ್ದಾನೆ. ಸದ್ಯ ಆರ ಧಾರವಾಡದಲ್ಲಿ ವಾಸವಿದ್ದ ಎಂದು ತಿಳಿದುಬಂದಿದೆ.

Share Post