ಮಗಳಿಗೆ ಅನಾರೋಗ್ಯ; ವಜಾಗೊಂಡ ಅಪ್ಪನನ್ನು ಮರುನೇಮಕ ಮಾಡಿದ KSTRC ಎಂಡಿ
ಬೆಂಗಳೂರು; ಒಂದು ಕಡೆ ಏಳು ವರ್ಷದ ಮಗಳು ವೈದ್ಯರ ಲೋಪದಿಂದ ತನ್ನ ಎಡಗೈ ಕಳೆದುಕೊಂಡಿದ್ದಾಳೆ. ಇನ್ನೊಂದೆಡೆ ತಂದೆ ದೀರ್ಘಾವಧಿಯ ಗೈರು ಹಾಜರಿಯಿಂದಾಗಿ KSRTC ಯ ಡ್ರೈವರ್ ಕಂ ಕಂಡಕ್ಟರ್ ಹುದ್ದೆಯಿಂದ ವಜಾಗೊಂಡಿದ್ದರು. ಇದರಿಂದಾಗಿ ಅವರ ಬದುಕು ದುಸ್ತರವಾಗಿತ್ತು. ಆಗ ನೆರವಿಗೆ ಬಂದವರೇ KSRTC MD. ಹೌದು, ಪುಟ್ಟ ಮಗುವಿನ ಮನವಿ ಮೇರೆಗೆ ವಜಾಗೊಂಡಿದ್ದ ಚಾಲಕ ಕಂ ನಿರ್ವಾಹಕನನ್ನು ಮತ್ತೆ ಕೆಲಸಕ್ಕೆ ನೇಮಿಸಿಕೊಂಡು ಕೆಎಸ್‌ಆರ್‌ಟಿಸಿ ಎಂಡಿ ಮಾನವೀಯತೆ ಮೆರೆದಿದ್ದಾರೆ.
ಚಿಕ್ಕಮಗಳೂರು ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ಲೋಕೇಶ್ ಎಂಬುವವರೇ ಮತ್ತೆ ಕೆಲಸಕ್ಕೆ ಸೇರ್ಪಡೆಯಾದವರು. ಇವರ ಮಗಳು ಭೂಮಿಕ ವೈದ್ಯಕೀಯ ಲೋಪದಿಂದ ಎಡಗೈ ಕಳೆದುಕೊಂಡು ಕೃತಕ ಜೋಡಣೆಯಿಂದ ಹೊಸ ಜೀವನೋತ್ಸಾಹ ಕಂಡುಕೊಂಡಿದ್ದಾಳೆ. ಕೆಲೊಸ ಇಲ್ಲದಿದ್ದರಿಂದಾಗಿ ಇವರ ಕುಟುಂಬದ ನಿರ್ವಹಣೆ ಕಷ್ಟವಾಗಿತ್ತು. ಹೀಗಾಗಿ ಚಾಲಕ ಲೋಕೇಶ್ ಅವರು ತನ್ನ ಮಗಳೊಂದಿಗೆ ,ಕೆ ಎಸ್ ಆರ್ ಟಿ ಸಿ ಕೇಂದ್ರ ಕಛೇರಿಯಲ್ಲಿ ವ್ಯವಸ್ಥಾಪಕ ನಿರ್ದೇಶಕರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರು. ವ್ಯವಸ್ಥಾಪಕ ನಿರ್ದೇಶಕರು ಆ ಮಗುವನ್ನು ಮಾತನಾಡಿಸಿ, ಚಾಕೋಲೇಟ್ ನೀಡಿ ಅಪ್ಪನಿಗೆ ಕೆಲಸ ಕೊಡಬೇಕಾ ಎಂದಾಗ ನನ್ನ ಅಪ್ಪನಿಗೆ ಕೆಲಸ ಕೊಡಿ ಸರ್ ಎಂದು ಆ ಮಗುವು ಕೇಳಿತು. ಅನಂತರ ಕೆಎಸ್‌ಆರ್‌ಟಿಸಿ ಎಂಡಿ, ಲೋಕೇಶ್ ಅವರನ್ನು ಮರುನೇಂಕ ಮಾಡಿಕೊಂಡಿದ್ದಾರೆ.