BengaluruPolitics

ಹೆಚ್ಡಿಕೆಯವರು ತಮ್ಮ ಪ್ಲ್ಯಾನ್‌ ಏನಿದೆ ಎಂದು ಹೇಳಿದ್ದಾರೆ; ಡಿಕೆಶಿ ಆಕ್ರೋಶ

ಬೆಂಗಳೂರು; ಡಿಸಿಎಂ ಡಿ.ಕೆ.ಶಿವಕುಮಾರ್‌ ಅವರು ಶಾಶ್ವತವಾಗಿ ತಿಹಾರ್‌ ಜೈಲು ಸೇರಲಿದ್ದಾರೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಹೇಳಿದ್ದರು. ಇದಕ್ಕೆ ಡಿಸಿಎಂ ಡಿ.ಕೆ.ಶಿವಕುಮಾರ್‌ ಪ್ರತಿಕ್ರಿಯೆ ನೀಡಿದ್ದಾರೆ. ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಹೆಚ್ಡಿಕೆಯವರು ಅವರ ಪ್ಲ್ಯಾನ್‌ ಏನಿದೆ ಎಂದು ಹೇಳುತ್ತಿದ್ದಾರೆ. ಏನೆಲ್ಲಾ ಮಾಡಲು ಸಾಧ್ಯವೋ ಅದನ್ನೆಲ್ಲಾ ಹೇಳುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕುಮಾರಸ್ವಾಮಿಯವರು ಏನು ಹೇಳಿದ್ದಾರೆ ಅನ್ನೋದು ನನಗೆ ಗೊತ್ತಿಲ್ಲ. ಅದನ್ನು ಮೊದಲು ನೋಡುತ್ತೇನೆ. ಅವರ ನುಡಿಮುತ್ತುಗಳನ್ನು ಕೇಳಿ ಉತ್ತರ ಕೊಡುತ್ತೇನೆ. ನನ್ನನ್ನು ಜೈಲಿಗೆ ಕಳುಹಿಸುವ ಅವರ ಪ್ಲ್ಯಾನ್‌ ಏನು ಅಂತ ಹೇಳ್ತಿರಬಹುದು. ಈ ಹಿಂದೆಯೂ ಪಾಪ ಮಾಡಿದ್ದರಲ್ವಾ..? ಎಂದು ಕೇಳಿದರು.

ಇತ್ತ ಡಿ.ಕೆ.ಸುರೇಶ್‌ ಕೂಡಾ ಕುಮಾರಸ್ವಾಮಿ ಹೇಳೀಕೆಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಹುಶಃ ಕುಮಾರಸ್ವಾಮಿಯವರು ಡಿಕೆಶಿಯವರನ್ನು ಜೈಲಿಗೆ ಕಳುಹಿಸುವಂತೆ ಅಮಿತ್‌ ಶಾ ಅವರಿಗೆ ರಿಕ್ವೆಸ್ಟ್‌ ಮಾಡಿರಬಹುದು ಎಂದು ಲೇವಡಿ ಮಾಡಿದ್ದಾರೆ. ಇವರ ಗೊಡ್ಡು ಬೆದರಿಕೆಗಳಿಗೆ ನಾವು ಹೆದರೋದಿಲ್ಲ ಎಂದೂ ಡಿ.ಕೆ.ಸುರೇಶ್‌ ಹೇಳಿದ್ದಾರೆ.

Share Post