Bengaluru

ಹೈಕೋರ್ಟ್‌ ತೀರ್ಪು ಬರುವವರೆಗೆ ರಜೆ ನೀಡಿ-ಶಾಸಕ ಯತ್ನಾಳ್

ಬೆಂಗಳೂರು:  ಶಾಲಾ-ಕಾಲೇಜುಗಳಲ್ಲಿ ಭುಗಿಲೆದ್ದಿರುವ ಹಿಜಾಬ್‌ ವಿವಾದದ ಕುರಿತಾಗಿ ಬಿಜೆಪಿ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಹೇಳಿಕೆ ನೀಡಿದ್ದಾರೆ. ರಾಜ್ಯದಲ್ಲಿ ಪರಿಸ್ಥಿತಿ ಕೈ ಮೀರಿದೆ. ವಿದ್ಯಾರ್ಥಿಗಳು ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿದ್ದಾರೆ. ಪೊಲೀಸರು-ವಿದ್ಯಾರ್ಥಿಗಳ ನಡುವೆ ಕಲ್ಲು ತೂರಾಟ, ಲಾಠಿ ಚಾರ್ಜ್‌ ಕೂಡ ನಡೆದಿದೆ. ಇದನ್ನು ತಿಳಿಗೊಳಿಸಲು ಸರ್ಕಾರ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಸಲಹೆ ನೀಡಿದ್ದಾರೆ.

ಹೇಗಿದ್ದರೂ ವಿವಾದ ಹೈ ಕೋರ್ಟ್‌ನಲ್ಲಿ ಅರ್ಜಿ ವಿಚಾರಣೆ ನಡೆಯುತ್ತಿದೆ. ತೀರ್ಪು ಬರುವವರೆಗೂ ಕಾಲೇಜುಗಳಿಗೆ ರಜೆ ನೀಡಿ ಎಂದು ಮನವಿ ಮಾಡಿಕೊಂಡಿದ್ದಾರೆ. ಹಿಜಾವ್‌ ವಿವಾದವನ್ನು ಬೇಕಂತಲೇ ಎಬ್ಬಿಸಿದ್ದಾರೆ. ಉದ್ದೇಶ ಪೂರ್ವಕವಾಗಿ ಈ ಗಲಾಟೆ ನಡೆಯುತ್ತಿದೆ. ಹೈಕೋರ್ಟ್‌ ಈ ಬಗ್ಗೆ ಶೀಘ್ರ ನ್ಯಾಯ ಕೊಡಲೆಂದು ಮನವಿ ಮಾಡಿಕೊಳ್ಳುತ್ತಿದ್ದೇನೆ. ಪರಿಸ್ಥಿತಿ ಶಮನವಾಘುವವರೆಗೂ ಒಂದು ವಾರಗಳ ಕಾಲ ರಜೆ ನೀಡಿ, ಹಿಜಾಬ್‌ ಬೆಂಬಲಿಸುವವರ ಉದ್ದೇಶವೇ ಗಲಾಟೆ ಮಾಡುವುದು. ಅಶಾಂತಿ ಸೃಷ್ಟಿಸಿವುದು ಅವರ ಮುಖ್ಯ ಧ್ಯೇಯವಾಗಿದೆ ಇದನ್ನು ಹತ್ತಿಕ್ಕಲು ರಜೆ ಒಂದೇ ದಾರಿ ಎಂದು ಬಿಜೆಪಿ ಶಾಸಕ ಯತ್ನಾಳ್‌ ತಿಳಿಸಿದ್ದಾರೆ.

Share Post