Bengaluru

ಕಾಶಿಯಿಂದ ಸೆಲ್ಫಿ ಕಳುಹಿಸಿ; 5 ಸಾವಿರ ರೂ. ಸಬ್ಸಿಡಿ ನಿಮ್ಮದಾಗಿಸಿಕೊಳ್ಳಿ!

ಬೆಂಗಳೂರು; ಕಾಶಿ ಯಾತ್ರೆಯ ಸಬ್ಸಿಡಿ ಪಡೆಯಲು ಇರುವ ನಿಯಮಗಳನ್ನು ರಾಜ್ಯ ಸರ್ಕಾರ ಸಡಿಲಗೊಳಿಸಿದೆ. ಇನ್ನ ಮೇಲೆ ಕಾಶಿ ಯಾತ್ರೆ ಕೈಗೊಂಡವರು, ಕಾಶಿ ವಿಶ್ವನಾಥ ದೇಗುಲದ ಐದು ಕಿಲೋ ಮೀಟರ್‌ ಸುತ್ತಳತೆಯ ಯಾವುದೇ ಪ್ರದೇಶದಲ್ಲಿ ಸೆಲ್ಫಿ ತೆಗೆದು ಅದನ್ನು ಮುಜರಾಯಿ ಇಲಾಖೆಯ ಮೊಬೈಲ್‌ ಅಪ್ಲಿಕೇಷನ್‌ ಅಥವಾ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್‌ ಮಾಡಿ, 5 ಸಾವಿರ ರೂಪಾಯಿ ಸಬ್ಸಿಡಿ ಪಡೆಯಬಹುದಾಗಿದೆ.
ಈ ಮೊದಲು ಸಬ್ಸಿಡಿ ಪಡೆಯಬೇಕೆಂದರೆ ಬಯೋಮೆಟ್ರಿಕಲಿ ಅಟೆಸ್ಟೆಡ್‌ ಸರ್ಟಿಫಿಕೇಟ್‌ ಹಾಗೂ ವಾರಣಾಸಿಯಲ್ಲಿರುವ ಕರ್ನಾಟಕ ಗೆಸ್ಟ್‌ ಹೌಸ್‌ನವರು ದರ್ಶನದ ಟಿಕೆಟ್‌ನ್ನು ಅಟೆಸ್ಟೆಡ್‌ ಮಾಡಿಕೊಟ್ಟಿರಬೇಕಾಗಿತ್ತು. ಆದ್ರೆ, ಈಗ ಅದೆಲ್ಲಾ ಬೇಕಾಗಿಲ್ಲ. ವಾರಣಾಸಿಯಲ್ಲಿ ಒಂದು ಸೆಲ್ಫಿ ತೆಗೆದು ಅಪ್‌ಲೋಡ್‌ ಮಾಡಿದರೆ, ನಿಮ್ಮ ಸಬ್ಸಿಡಿ ಹಣ ಸಿಗಲಿದೆ ಎಂದು ಮುಜರಾಯಿ ಇಲಾಖೆ ತಿಳಿಸಿದೆ. ಭಕ್ತರು 18 ವರ್ಷ ಮೇಲ್ಪಟ್ಟವರಾಗಿರಬೇಕು. ಜೊತೆಗೆ ಕಾಶಿ ಯಾತ್ರೆ ಕೈಗೊಳ್ಳುವ ಮೊದಲ ಸಬ್ಸಿಡಿಗಾಗಿ ಇಲಾಖೆಗೆ ವೆಬ್‌ಸೈಟ್‌ ಅಥವಾ ಮೊಬೈಲ್‌ ಆಪ್‌ನಲ್ಲಿ ರಿಜಿಸ್ಟರ್‌ ಮಾಡಿಕೊಂಡಿರಬೇಕು. ಅನಂತರ ಕಾಶಿ ಯಾತ್ರೆ ವೇಳೆ ಅಲ್ಲಿನ ಸೆಲ್ಫಿ ಅಪ್‌ಲೋಡ್‌ ಮಾಡಬೇಕಾಗುತ್ತದೆ.

ಕರ್ನಾಟಕ ಸರ್ಕಾರ ಪ್ರತಿ ವರ್ಷ ಕಾಶಿ ಯಾತ್ರೆ ಕೈಗೊಳ್ಳುವ 30 ಸಾವಿರ ಮಂದಿಗೆ ತಲಾ 5 ಸಾವಿರ ರೂಪಾಯಿ ಸಬ್ಸಿಡಿ ನೀಡಲಾಗುತ್ತದೆ.

Share Post