BengaluruPolitics

ಮಾಜಿ ಸಿಎಂ ಕುಮಾರಸ್ವಾಮಿ ಮತ್ತೆ ವಿದೇಶ ಪ್ರಯಾಣ

ಬೆಂಗಳೂರು; ಮಾಜಿ ಸಿಎಂ ಕುಮಾರಸ್ವಾಮಿ ಇತ್ತೀಚೆಗಷ್ಟೇ ಯೂರೋಪ್‌ ಪ್ರವಾಸ ಕೈಗೊಂಡಿದ್ದರು. ಕುಟುಂಬ ಸಮೇತ ಯೂರೋಪ್‌ ಸುತ್ತಾಡಿ ವಾರದ ಹಿಂದಷ್ಟೇ ಅವರು ಬೆಂಗಳೂರಿಗೆ ಬಂದಿದ್ದರು. ಇದೀಗ ಮತ್ತೆ ಅವರು ವಿದೇಶಕ್ಕೆ ಹಾರಿದ್ದಾರೆ. ಈ ಬಾರಿ ಕಾಂಬೋಡಿಯಾಕ್ಕೆ ತೆರಳಿದ್ದಾರೆ. ಆಪ್ತರ ಜೊತೆ ಅವರು ಕಳೆದ ರಾತ್ರಿ ಕಾಂಬೋಡಿಯಾಕ್ಕೆ ಪ್ರಯಾಣ ಬೆಳೆಸಿದ್ದಾರೆ. 

ನಾಲ್ಕು ದಿನಗಳ ಪ್ರವಾಸ ಇದಾಗಿದ್ದು, ಆಗಸ್ಟ್‌ 12ರಂದು ಕುಮಾರಸ್ವಾಮಿಯವರು ಬೆಂಗಳೂರಿಗೆ ವಾಪಸ್ಸಾಗಲಿದ್ದಾರೆ ಎಂದು ತಿಳಿದುಬಂದಿದೆ. ಜುಲೈ 23ರಂದು ಯೂರೋಪ್‌ ಪ್ರವಾಸಕ್ಕೆ ತೆರಳಿದ್ದರು. ಪತ್ನಿ ಅನಿತಾ ಕುಮಾರಸ್ವಾಮಿ, ಸೊಸೆ ಹಾಗೂ ಮಗ ಕೂಡಾ ಈ ವೇಳೆ ಜೊತೆಯಲ್ಲಿದ್ದರು.  ಎರಡು ವಾರಗಳ ಕಾಲ ಯೂರೋಪ್‌ನಲ್ಲಿದ್ದ ಕುಟುಂಬ ಕಳೆದ ವಾರವಷ್ಟೇ ಬೆಂಗಳೂರಿಗೆ ಬಂದಿತ್ತು.

ಇದೀಗ ಕುಮಾರಸ್ವಾಮಿಯವರು ಆತ್ಮೀಯರ ಜೊತೆ ಕಾಂಬೋಡಿಯಾಗೆ ತೆರಳಿದ್ದಾರೆ.

 

Share Post