ನೀತಿ ಸಂಹಿತೆ ವೇಳೆ ಸಿಎಂಗೆ ಸಿಗುವ ಸೌಲಭ್ಯಗಳು, ಏನು ಮಾಡಬಾರದು..?
ಬೆಂಗಳೂರು; ಚುನಾವಣಾ ನೀತಿ ಸಂಹಿತೆ ಜಾರಿಯಾದ ಯಾವುದೇ ಸರ್ಕಾರಿ ಕಾರ್ಯಕ್ರಮಗಳು ಭಾಗಿಯಾಗುವಂತಿಲ್ಲ. ಯೋಜನೆಗಳಿಗೆ ಚಾಲನೆ ನೀಡುವಂತಿಲ್ಲ. ಹೀಗಿದ್ದರೂ ಸಿಎಂಗೆ ನೀತಿ ಸಂಹಿತೆ ಜಾರಿ ನಂತರವೂ ಕೆಲ ಸೌಲಭ್ಯಗಳು ಸಿಗಲಿವೆ.
೧. ಸಿಎಂ ಸರ್ಕಾರಿ ಕಾರನ್ನು ಕಚೇರಿ, ವಿಧಾನಸೌಧಕ್ಕೆ ಬಳಸಬಹುದು.
೨. ಜಿಲ್ಲಾ ಪ್ರವಾಸ, ಪ್ರಚಾರಗಳಿಗೆ ಸರ್ಕಾರಿ ವಾಹನ ಬಳಕೆ ನಿರ್ಬಂಧವಿರುತ್ತೆ
೩. ಸಿಎಂಗೆ ಇರುವ ಭದ್ರತೆಯಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ
೪. ಆದೇಶ ಮಾಡುವ, ಸಹಿ ಹಾಕುವ, ಸರ್ಕಾರಿ ಕಾರ್ಯಕ್ರಮದಲ್ಲಿ ಭಾಗವಹಿಸುವ ಅಧಿಕಾರ ಇರಲ್ಲ
೫. ಪಕ್ಷದ ಕಾರ್ಯಕ್ರಮ, ಸಮಾವೇಶದಲ್ಲಿ ಭಾಗವಹಿಸಬಹುದು