Bengaluru

ಒಪಿಎಸ್​ ಜಾರಿಗೆ ಗಡುವು; ಮಾತುಕತೆಗೆ ಮುಂದಾದ ಸಿಎಂ

ಬೆಂಗಳೂರು; 7ನೇ ವೇತನ ಆಯೋಗದ ಮೂಲಕ ಹಳೇ ಪಿಂಚಣಿ ನೀತಿ​ ಅನುಷ್ಠಾನಕ್ಕೆ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ರಾಜ್ಯ ಸರ್ಕಾರಕ್ಕೆ 7 ದಿನಗಳ ಗಡುವು ನೀಡಿದೆ. ಈ ನಡುವೆ ನೌಕರರ ಸಂಘದ ಮುಖಂಡರ ಜೊತೆ ಮಾತುಕತೆ ನಡೆಸೋದಕ್ಕೆ ಸಿಎಂ ಬೊಮ್ಮಾಯಿ ಮುಂದಾಗಿದ್ದಾರೆ.

ಶುಕ್ರವಾರ ಸರ್ಕಾರಿ ನೌರರ ಸಂಘದ ಮುಖಂಡರ ಜೊತೆ ಮುಖ್ಯಮಂತ್ರಿ ಬೊಮ್ಮಾಯಿ ಚರ್ಚೆ ನಡೆಸುವ ಸಾಧ್ಯತೆ ಇದೆ. ಮುಷ್ಕರದಂಥ ಆತುರದ ನಿರ್ಧಾರ ಕೈಗೊಳ್ಳದಂತೆ ಈ ಸಭೆಯಲ್ಲಿ ಸಿಎಂ ಮನವಿ ಮಾಡಲಿದ್ದಾರೆ ಎಂದು ತಿಳಿದುಬಂದಿದೆ. ಈ ಬಗ್ಗೆ ಸಿಎಂ ಬೊಮ್ಮಾಯಿ ಈಗಾಗಲೇ ನೌಕರರ ಸಂಘದ ಮುಖಂಡರಿಗೆ ಸಂದೇಶ ರವಾನೆ ಮಾಡಿದ್ದಾರೆ.

ಸಿಎಂ ಬಳ್ಳಾರಿ ಪ್ರವಾಸದಲ್ಲಿದ್ದು, ಬೆಂಗಳೂರಿಗೆ ಬಂದ ತಕ್ಷಣ ಮಾತುಕತೆ ನಡೆಸುತ್ತಾರೆ ಎಂದು ತಿಳಿದುಬಂದಿದೆ.

Share Post