BengaluruPolitics

ಸಚಿವ ಸಂಪುಟದಲ್ಲಿ ದಲಿತರಿಗೆ ಹೆಚ್ಚು ಪ್ರಾಶಸ್ತ್ಯ

ಬೆಂಗಳೂರು; ಇಂದು ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರ ಅಸ್ತಿತ್ವಕ್ಕೆ ಬರುತ್ತಿದೆ. ಕಂಠೀರವ ಸ್ಟೇಡಿಯಂನಲ್ಲಿ ಕೆಲವೇ ಹೊತ್ತಿನಲ್ಲಿ ಪ್ರಮಾಣವಚನ ಸಮಾರಂಭ ನಡೆಯಲಿದೆ. ಈಗಾಗಲೇ ಸಾವಿರಾರು ಸಂಖ್ಯೆಯಲ್ಲಿ ಜನ ಸೇರಿದ್ದಾರೆ.

ಸಿದ್ದರಾಮಯ್ಯ ಸಿಎಂ ಆಗಿ, ಡಿ.ಕೆ.ಶಿವಕುಮಾರ್‌ ಡಿಸಿಎಂ ಆಗಿ ಪ್ರಮಾಣ ಸ್ವೀಕರಿಸುತ್ತಿದ್ದಾರೆ. ಇವರ ಜೊತೆ ಎಂಟು ಶಾಸಕರು ಸಂಪುಟ ಸೇರುತ್ತಿದ್ದಾರೆ. ಇದರಲ್ಲಿ ಬಹುಪಾಲು ಎಸ್‌ಸಿ, ಎಸ್‌ಟಿ ಹಾಗೂ ಅಲ್ಪಸಂಖ್ಯಾತರಿಗೆ ಅವಕಾಶ ನೀಡಲಾಗಿದೆ.

ಸಿಎಂ ಸಿದ್ದರಾಮಯ್ಯ ಕುರುಬರಾಗಿದ್ದರೆ, ಡಿಸಿಎಂ ಡಿ.ಕೆ.ಶಿವಕುಮಾರ್‌ ಒಕ್ಕಲಿಗರಾಗಿದ್ದಾರೆ. ಇನ್ನು ಉಳಿದಂತೆ ಮೂವರು ಎಸ್‌ಸಿ ವರ್ಗಕ್ಕೆ ಸೇರಿದರೆ, ಒಬ್ಬರು ಎಸ್‌ಟಿಗೆ ಸೇರಿದ್ದಾರೆ. ಒಬ್ಬರು ಕ್ರಿಶ್ಚಿಯನ್‌, ಒಬ್ಬರು ಮುಸ್ಲಿಂ, ಒಬ್ಬರು ಲಿಂಗಾಯತ ಹಾಗೂ ಉಳಿದೊಬ್ಬರು ರೆಡ್ಡಿ ಒಕ್ಕಲಿಗರಿಗೆ ಸಚಿವ ಸ್ಥಾನ ನೀಡಲಾಗಿದೆ.

ಸಿದ್ದರಾಮಯ್ಯ, ಮುಖ್ಯಮಂತ್ರಿ (ಕುರುಬ)

ಡಿ.ಕೆ.ಶಿವಕುಮಾರ್‌, ಉಪ ಮುಖ್ಯಮಂತ್ರಿ (ಒಕ್ಕಲಿಗ)

ಡಾ.ಜಿ.ಪರಮೇಶ್ವರ್‌, ಮಾಜಿ ಉಪಮುಖ್ಯಮಂತ್ರಿ (ಎಸ್‌ಸಿ)

ಕೆ.ಹೆಚ್‌.ಮುನಿಯಪ್ಪ, ಮಾಜಿ ಕೇಂದ್ರ ಸಚಿವ (ಎಸ್‌ಸಿ)

ಕೆ.ಜೆ.ಜಾರ್ಜ್‌, ಮಾಜಿ ಗೃಹಸಚಿವ (ಕ್ರಿಶ್ಚಿಯನ್‌)

ಎಂ.ಬಿ.ಪಾಟೀಲ್‌, ಮಾಜಿ ಜಲಸಂಪನ್ಮೂಲ ಸಚಿವ (ಲಿಂಗಾಯತ)

ಸತೀಶ್‌ ಜಾರಕಿಹೊಳಿ, ಕೆಪಿಸಿಸಿ ಕಾರ್ಯಾಧ್ಯಕ್ಷ (ಎಸ್‌ಟಿ-ವಾಲ್ಮೀಕಿ)

ಪ್ರಿಯಾಂಕ್‌ ಖರ್ಗೆ, ಖರ್ಗೆ ಪುತ್ರ, ಮಾಜಿ ಸಚಿವ (ಎಸ್‌ಸಿ)

ರಾಮಲಿಂಗಾರೆಡ್ಡಿ, ಮಾಜಿ ಸಚಿವ (ರೆಡ್ಡಿ ಒಕ್ಕಲಿಗ)

ಜಮೀರ್‌ ಅಹ್ಮದ್‌ ಖಾನ್‌, ಮಾಜಿ ಸಚಿವ (ಮುಸ್ಲಿಂ)

 

Share Post