Bengaluru

ಚಂದ್ರನ ಮೇಲೆ ಮಾನವ ಸಂಚರಿಸಲು ಕ್ರೂಸರ್‌ ವಾಹನ ತಯಾರಿಕೆಗೆ ಪ್ಲಾನ್

ಬೆಂಗಳೂರು: ಚಂದ್ರನ ಮೇಲೆ ಮನುಷ್ಯನನ್ನು ಕರೆದೊಯ್ಯಲು ಟೊಯೋಟಾ ಕಂಪನಿ ಕ್ರೂಸರ್‌ ತಯಾರಿಕೆಗೆ ಮುಂದಾಗಿದೆ.  ಈ ಲೂನಾರ್ ಕ್ರೂಸರ್ ವಾಹನವನ್ನು ಜಪಾನ್ ಏರೋಸ್ಪೇಸ್ ಎಕ್ಸ್‌ಪ್ಲೋರೇಶನ್ ಏಜೆನ್ಸಿಯ ಸಹಭಾಗಿತ್ವದಲ್ಲಿ ಈ ವಾಹನನ್ನು ಅಭಿವೃದ್ಧಿ ಪಡಿಸಲಾಗುತ್ತಿದೆ.  2030 ರ ಅಂತ್ಯದ ವೇಳೆಗೆ ವಾಹನವು ಸಿದ್ಧವಾಗಲಿದೆ ಎಂದು ಟೊಯೋಟಾ ಸಂಸ್ಥೆ ತಿಳಿಸಿದೆ. ಅಲ್ಲದೆ 2040ವೇಳೆಗೆ ಮಂಗಳ ಗ್ರಹಕ್ಕೆ ತಲುಪುವ ಯೋಚನೆ ಇದೆ ಎಂದಿದ್ದಾರೆ.

ಟೊಯೊಟಾ ಅವರು ತಾವು ಅಭಿವೃದ್ಧಿಪಡಿಸುತ್ತಿರುವ ಲೂನಾರ್ ಕ್ರೂಸರ್ ವಾಹನವನ್ನು ಚಂದ್ರನ ಮೇಲೆ ಕೊಂಡೊಯ್ಯುವುದಷ್ಟೇ ಅಲ್ಲ. ಮಾನವ ಅಲ್ಲಿ ಸುಗಮವಾಗಿ ಸಂಚರಿಸಲು ಬೇಕಾದ ಎಲ್ಲಾ ಸೂಕ್ತ ವ್ಯವಸ್ತೆಯನ್ನು ಮಾಡಲಾಗುವುದು ಎಂದು ತಿಳಿಸಿದೆ. ಕ್ರೂಸರ್‌ನಲ್ಲಿಯೇ ಚಂದ್ರನನ್ನು ಸುತ್ತಲು ಅಗತ್ಯ ವ್ಯವಸ್ಥೆಗಳನ್ನು ಮಾಡಲಾಗುವುದು ಎಂದು ಲೂನಾರ್ ಲ್ಯಾಂಡ್ ಬಹಿರಂಗಪಡಿಸಿದೆ.

ಪ್ರತಿ ನೂರು ವರ್ಷಗಳಿಗೊಮ್ಮೆ ಬಾಹ್ಯಾಕಾಶ ತಂತ್ರಜ್ಞಾನವು ಗಮನಾರ್ಹ ಬದಲಾವಣೆಗಳಿಗೆ ಒಳಗಾಗುತ್ತದೆ. ಹಾಗಾಗಿ ಅದೇ ತಂತ್ರಜ್ಞಾನವನ್ನು ಒಳಗೊಂಡು ಈ ವಾಹನವನ್ನು ತಯಾರು ಮಾಡಲಾಗುತ್ತಿದೆ ಎಂದಿದ್ದಾರೆ.   ಭೂಮಿಯ ಮೇಲಿನ ವಾಹನಗಳು ಒಂದು ಊರಿನಿಂದ ಇನ್ನೊಂದು ಊರಿಗೆ ಪ್ರಯಾಣಿಸುವಂತೆ ಚಂದ್ರನ ಮೇಲೂ ಪ್ರತಿನಿತ್ಯ ಓಡಾಡುವ ರೀತಿ ಮಾಡುವ ಗುರಿ ನಮ್ಮದಾಗಿದೆ ಎಂದಿದ್ದಾರೆ.

Share Post