Bengaluru

ಸಾಹಿತಿ, ನಾಟಕಕಾರ ʼಚಂದ್ರಶೇಖರ ಪಾಟೀಲʼ ನಿಧನ

ಬೆಂಗಳೂರು : ಸಾಹಿತ್ಯ ಲೋಕದಲ್ಲಿ ಚಂಪಾ ಎಂದೇ ಖ್ಯಾತಿಗಳಿಸಿದ್ದ ಚಂದ್ರಶೇಖರ ಪಾಟೀಲ ಅವರು ಇಂದು ಇಹಲೋಕ ತ್ಯಜಿಸಿದ್ದಾರೆ. 1939ರ ಜೂನ್‌ 18ರಂದು ಹಾವೇರಿ ಜಿಲ್ಲೆಯ ಸವಣೂರು ತಾಲ್ಲೂಕಿನ ಹತ್ತಿಮತ್ತೂರು ಗ್ರಾಮದಲ್ಲಿ ಜನಿಸಿದ್ದರು. 15 ವರ್ಷಗಳ ಹಿಂದೆ ಹೃದಯದ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದರು ಚಂಪಾ.

ಕನ್ನಡ ನಾಡಿನ ಸಾಹಿತ್ಯ, ಭಾಷಾ ಚಳುವಳಿಗಳಲ್ಲಿ ಚಂಪಾ ಸದಾ ಮುಂದೆ ಇರುತ್ತಿದ್ದರು. ನಗರದ ಕೋಣನಕುಂಟೆಯ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಅವರು, ಇಂದು ಮುಂಜಾನೆ ಕೊನೆಯುಸಿರೆಳೆದರು. ಯಲಚೇನಹಳ್ಳಿಯಲ್ಲಿರುವ ಅವರ ನಿವಾಸಕ್ಕೆ ಪಾರ್ಥೀವ ಶರೀರವನ್ನು ಶಿಫ್ಟ್‌ ಮಾಡಲಾಗುವುದು ಎಂದು ವರದಿಯಾಗಿದೆ.

ಅಂತ್ಯಕ್ರಿಯೆ ಎಲ್ಲಿ ನಡೆಸುವುದು ಎಂಬುದರ ಬಗ್ಗೆ ಇನ್ನು ಚರ್ಚೆ ನಡೆದಿದೆ. ಬೆಂಗಳೂರು ಅಥವಾ ಹಾವೇರಿಯ ಡೊಂಬರಮತ್ತೂರಿನಲ್ಲಿ ನಡೆಸುವುದರ ಬಗ್ಗೆ ಚಿಂತಿಸಲಾಗ್ತಿದೆ. ಕೋವಿಡ್‌ ನಿಯಮಗಳನ್ನು ಗಮನದಲ್ಲಿಟ್ಟುಕೊಂಡು ತೀರ್ಮಾನ ತೆಗೆದುಕೊಳ್ಳಲಿದೆ ಕುಟುಂಬ.

ಚಂಪಾ ಅವರ ಸಾವಿಗೆ ಸಂತಾಪ ಸೂಚಿಸಿ ಮುಖ್ಯಮಂತ್ರಿ  ಬಸವರಾಜ್‌ ಬೊಮ್ಮಾಯಿ, ಮಾಜಿ ಮೂಖ್ಯಮಂತ್ರಿ ಯಡಿಯೂರಪ್ಪ, ಕುಮಾರಸ್ವಾಮಿ ಮತ್ತು ಇನ್ನಿತರ ಗಣ್ಯರುಗಳು ಟ್ವೀಟ್‌ ಮಾಡಿದ್ದಾರೆ

 

 

Share Post