Bengaluru

ಆಗಸದಲ್ಲಿ ಮೊಟ್ಟ ಮೊದಲ ಬಾರಿಗೆ ಬಜೆಟ್‌ ಪ್ರಚಾರ-ವಿಧಾನಸೌಧ ಸುತ್ತ ಒಂದು ಸುತ್ತು ಹಾಕಿದ ಬಜೆಟ್‌ ಜೆಟ್

ಬೆಂಗಳೂರು: ಮುಖ್ಯಮಂತ್ರಿ ಬಸವರಾಜ್‌ ಬೊಮ್ಮಾಯಿಯವರು ಚೊಚ್ಚಲ ಬಜೆಟ್‌ ಮಂಡಿಸಲಿದ್ದಾರೆ. ಇಂದು 12.30ಕ್ಕೆ ಮಂಡಿಸಲಿರುವ ಬಜೆಟ್‌ ಬಗ್ಗೆ ಆಕಾಶದಲ್ಲಿ ಪ್ರಚಾರ ನಡೆಸಿದ್ದಾರೆ. ಜೆಟ್‌ ಮೂಲಕ ವಿಧಾನಸೌಧ ಸುತ್ತಮುತ್ತ ಬಜೆಟ್‌ ಪ್ರಚಾರ ನಡೆಸಿದ್ದಾರೆ. ಇದೇ ಮೊದಲ ಬಾರಿಗೆ ಅತ್ಯಂತ ವಿಶೇಷವಾಗಿ ರಾಜ್ಯ ಬಜೆಟ್‌ ಬಗ್ಗೆ ಪ್ರಚಾರ ಮಾಡಿದ್ದಾರೆ. ಲಘು ಜೆಟ್‌ ವಿಮಾನ ಬಜೆಟ್‌ ಪ್ರತಿ ಹಿಡಿದು ಬಾನಂಗಳದಲ್ಲಿ ಹಾರತೊಡಗಿದೆ.

ಮೊದಲ ಬಾರಿಗೆ ಬೊಮ್ಮಾಯಿಯವರು ಬಜೆಟ್‌ ಮಂಡಿಸುತ್ತಿರುವ ಹಿನ್ನೆಲೆಯಲ್ಲಿ ಇಂದು ವಿಧಾನಸೌಧಕ್ಕೆ ಮುಖ್ಯಮಂತ್ರಿ ಕುಟುಂಬ ಕೂಡ ಆಗಮಿಸಿದೆ. ಪತ್ನಿ, ಮಗಳು, ಮಗ ಸೇರಿದಂತೆ ಕುಟುಂಬಸ್ಥರು ವಿಧಾಸೌಧಕ್ಕೆ ಬಂದಿದ್ದಾರೆ. 12.10ಕ್ಕೆ ಬಜೆಟ್‌ ಸಂಪುಟ ಸಭೆ ನಡೆಯಲಿದೆ. ಅನುಮೋದನೆ ಪಡೆದ ಬಳಿಕ ಸಿಂಎ ಬಜೆಟ್‌ ಮಂಡನೆ ಮಾಡಲಿದ್ದಾರೆ.

Share Post