Bengaluru

ವಾಟರ್‌ ಟ್ಯಾಂಕರ್‌ ಕಳ್ಳಾಟಕ್ಕೆ ಬ್ರೇಕ್‌; ಟ್ಯಾಂಕರ್‌ ನೀರಿಗೆ ದರ ನಿಗದಿ

ಬೆಂಗಳೂರು; ಬೆಂಗಳೂರು ಮಹಾನಗರದಲ್ಲಿ ಬೇಸಿಗೆಯ ಶುರುವಿನಲ್ಲೇ ನೀರಿಗಾಗಿ ಹಾಹಾಕಾರ ಶುರುವಾಗಿದೆ. ಎಲ್ಲೆಲ್ಲೂ ನೀರಿನ ಸಮಸ್ಯೆ ಎದುರಾಗಿದ್ದು, ಜನ ಟ್ಯಾಂಕರ್‌ ನೀರಿನ ಮೊರೆ ಹೋಗುತ್ತಿದ್ದಾರೆ. ಆದ್ರೆ ಟ್ಯಾಂಕರ್‌ ನವರು ಇದೇ ಒಳ್ಳೆಯ ಸಮಯ ಎಂದು ಒಂದು ಟ್ಯಾಂಕರ್‌ಗೆ 3000 ಸಾವಿರ ರೂಪಾಯಿಯವರೆಗೂ ಚಾರ್ಜ್‌ ಮಾಡುತ್ತಿದ್ದರು. ಈ ಹಗಲು ದರೋಡೆ ನಿಲ್ಲಿಸಲು ಸರ್ಕಾರ ಕ್ರಮ ಕೈಗೊಂಡಿದೆ.

ಬೆಂಗಳೂರು ನಗರ ಜಿಲ್ಲಾಧಿಕಾರಿ ವಾಟರ್‌ ಟ್ಯಾಂಕರ್‌ ಕಳ್ಳಾಟಕ್ಕೆ ಬ್ರೇಕ್‌ ಹಾಕಿದ್ದಾರೆ. ಟ್ಯಾಂಕರ್ ನೀರಿಗೆ ದರ ಫಿಕ್ಸ್ ಮಾಡಿ‌‌‌‌‌‌ ಆದೇಶ ಹೊರಡಿಸಿದ್ದಾರೆ. ಮೂರು ನಾಲ್ಕು ಬಾರಿ ಟ್ಯಾಂಕರ್ ಮಾಲೀಕರ ಜೊತೆ ಸಭೆ ನಡೆಸಿದ ನಂತರ ಈ ದರ ನಿಗದಿ ಮಾಡಲಾಗಿದೆ.

6 ಸಾವಿರ ಲೀಟರ್;

5 ಕಿಲೋ ಮೀಟರ್ – 600 ರೂಪಾಯಿ
10 ಕಿಲೋ ಮೀಟರ್ – 750 ರೂಪಾಯಿ

8 ಸಾವಿರ ಲೀಟರ್;

5 ಕಿಲೋ ಮೀಟರ್ – 700 ರೂಪಾಯಿ
10 ಕಿಲೋ ಮೀಟರ್ – 850 ರೂಪಾಯಿ

1,200 ಲೀಟರ್

5 ಕಿಲೋ ಮೀಟರ್ – 1000 ರೂಪಾಯಿ
10 ಕಿಲೋ ಮೀಟರ್ – 1200 ರೂಪಾಯಿ

ಇನ್ನು ತಿಂಗಳ ಬಾಡಿಗೆ ಒಪ್ಪಿಕೊಳ್ಳುವವರಿಗೆ 5 ಕಿಲೋ ಮೀಟರ್‌ಗೆ 510 ರೂಪಾಯಿ ಹಾಗೂ 10 ಕಿಲೋ ಮೀಟರ್ ಹೋದರೆ 650 ದರ ಫಿಕ್ಸ್ ಮಾಡಲಾಗಿದೆ. ಈ ದರ ಬಿಟ್ಟು ಹೆಚ್ಚಿನ ದರ ವಸೂಲಿ ಮಾಡಿದರೆ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಲಾಗಿದೆ.

ಸ್ನಾನ ಮಾಡಲು, ಪಾತ್ರೆ ತೊಳೆಯಲು ಕೂಡಾ ನೀರಿಲ್ಲ;

ಸ್ನಾನ ಮಾಡಲು, ಪಾತ್ರೆ ತೊಳೆಯಲು ಕೂಡಾ ನೀರಿಲ್ಲ; ಬೆಂಗಳೂರಿನ ಹಲವು ಪ್ರದೇಶಗಳಲ್ಲಿ ನೀರಿನ ಸಮಸ್ಯೆ ಎದುರಾಗಿದೆ.. ಬೋರ್‌ವೆಲ್‌ಗಳು ಬತ್ತಿಹೋಗಿರುವುದರಿಂದ ನೀರು ಪೂರೈಕೆ ಕಷ್ಟವಾಗುತ್ತಿದೆ. ಇನ್ನೊಂದೆಡೆ, ಬೆಂಗಳೂರಿನ ಬಹುತೇಕ ಭಾಗಕ್ಕೆ ಕಾವೇರಿ ನೀರು ಪೂರೈಕೆಯಾಗುತ್ತಿದೆ.. ಆದ್ರೆ ಈ ಬಾರಿ ಜಲಾಶಯಗಳಲ್ಲಿ ನೀರಿನ ಸಂಗ್ರಹಣೆ ಕಡಿಮೆಯಾಗಿದೆ. ಹೀಗಾಗಿ, ಹೆಚ್ಚಿನ ನೀರನ್ನು ಪೂರೈಕೆ ಮಾಡಲು ಕಷ್ಟವಾಗುತ್ತಿದೆ. ಈ ಎಲ್ಲಾ ಕಾರಣದಿಂದ ಕೆಲವೊಂದು ಸ್ನಾನ ಮಾಡಲು, ಪಾತ್ರೆ ತೊಳೆಯಲು ಕೂಡಾ ಜನರಿಗೆ ನೀರು ಸಿಗದಂತಾಗಿದೆ..

ಅಪಾರ್ಟ್‌ಮೆಂಟ್‌ಗಳು ನೀರಿನ ಸಮಸ್ಯೆ ತೀವ್ರ;

ಅಪಾರ್ಟ್‌ಮೆಂಟ್‌ಗಳು ನೀರಿನ ಸಮಸ್ಯೆ ತೀವ್ರ; ಅಪಾರ್ಟ್‌ಮೆಂಟ್‌ಗಳಲ್ಲಿ ನೂರಾರು ಮನೆಗಳಿರುತ್ತವೆ. ಈ ಅಪಾರ್ಟ್‌ಮೆಂಟ್‌ನ ಜನ ಬೋರ್‌ವೆಲ್‌ ನೀರನ್ನೇ ನಂಬಿದ್ದಾರೆ. ಆದ್ರೆ ಅಂತರ್ಜಲ ಕಡಿಮೆಯಾಗಿದ್ದರಿಂದ ಬೋರ್‌ವೆಲ್‌ಗಳು ಬತ್ತಿಹೋಗುತ್ತಿವೆ. ಹೀಗಾಗಿ ಅಪಾರ್ಟ್‌ಮೆಂಟ್‌ಗಳಲ್ಲೂ ನೀರಿನ ಕೊರೆತ ಉಂಟಾಗುತ್ತಿದೆ.

ಜಲಾಶಯಗಳಲ್ಲಿ ನೀರಿನ ಸಂಗ್ರಹ ಕಡಿಮೆ;

ಜಲಾಶಯಗಳಲ್ಲಿ ನೀರಿನ ಸಂಗ್ರಹ ಕಡಿಮೆ; ಈ ಬಾರಿ ರಾಜ್ಯದಲ್ಲಿ ಮಳೆ ಪ್ರಮಾಣ ಕಡಿಮೆಯಾಗಿದೆ. ಇದರಿಂದಾಗಿ ರಾಜ್ಯಾದ್ಯಂತ ಬರಗಾಲ ಪರಿಸ್ಥಿತಿ ಎದುರಾಗಿದೆ. ಹೀಗಾಗಿ ಕಾವೇರಿ ಕೊಳ್ಳದ ಜಲಾಶಯಗಳಾದ ಹಾರಂಗಿ, ಹೇಮಾವತಿ, ಕೆಆರ್‌ಎಸ್ ಮತ್ತು ಕಬಿನಿಗಳಲ್ಲಿನ ನೀರಿನ ಸಂಗ್ರಹ ಕುಸಿದಿದೆ. ಕಳೆದ ಬಾರಿಗೆ ಹೋಲಿಸಿಕೊಂಡರೆ ಈ ಸಲಾಶಯಗಳ ಒಟ್ಟು ಸಾಮರ್ಥ್ಯದ ಶೇಕಡಾ 39 ರಷ್ಟು ಮಾತ್ರವೇ ನೀರಿದೆ.  114.57 ಟಿಎಂಸಿ ಒಟ್ಟು ಸಾಮರ್ಥ್ಯವಾರದರೆ,  ಪ್ರಸ್ತುತ ಈ ಜಲಾಶಯಗಳು 44.65 ಟಿಎಂಸಿ ನೀರು ಮಾತ್ರ ಇದೆ. ಕಳೆದ ವರ್ಷ ಇದೇ ಸಮಯದಲ್ಲಿ ಈ ಜಲಾಶಯಗಳಲ್ಲಿ ಸುಮಾರು 64.61 ಟಿಎಂಸಿ ನೀರು ಇತ್ತು ಎಂಬುದನ್ನು ಗಮನಿಸಬೇಕಿದೆ.

 

.

Share Post