Bengaluru

ಸಾರಿಗೆ ನೌಕರರ ಮರು ನೇಮಕ, ಸಾರಿಗೆ ದರ ಏರಿಕೆ ಸದ್ಯಕ್ಕಿಲ್ಲ ಎಂದ ಶ್ರೀರಾಮುಲು

ಬೆಂಗಳೂರು: ಬೇಡಿಕೆಗಳನ್ನು ಈಡೇರಿಸುವಂತೆ ಮುಷ್ಕರ ನಡೆಸಿ ವಜಾಗೊಂಡಿದ್ದ ಸಾರಿಗೆ ನೌಕರರ ಮರುನೇಮಕಾತಿ ಪ್ರಕ್ರಿಯೆ ನಡೆದಿದೆ. ಇಂದು 100ನೌಕರರನ್ನು ನೇಮಕ ಮಾಡಿಕೊಳ್ಳಲಾಗಿದೆ. ನಾಳೆ 200ನೌಕರರ ನೇಮಕಾತಿ ನಡೆಯಲಿದೆ. ಮುಷ್ಕರದಲ್ಲಿ 1,610ನೌಕರರ ಭಾಗಿಯಾಗಿ ತೊಂದರೆಗೀಡಾಗಿದ್ದಾರೆ. ಮರುನೇಮಕ ಮಾಡಿಕೊಳ್ಳು ಕಾನೂನಿನಲ್ಲಿ ಅವಕಾಶ ಇಲ್ಲ. ನಿಮ್ಮ ಕುಟುಂಬದ ಸಮಸ್ಯೆಗಳನ್ನು ನೋಡಿ, ಕುಟುಂಬದ ಸ್ಸ್ಯರ ಮುಖ ನೋಡಿ ಮರು ನೇಮಕ ಮಾಡುತ್ತಿದ್ದೇವೆ ಎಂದಿದಾರೆ.

ನಿಮ್ಮೊಂದಿಗೆ ಮುಷ್ಕರ ಮಾಡಿದವರು ಓಡಿಹೋಗಿದ್ದಾರೆ. ಇಂದು ನಿಮ್ಮ ಜೊತೆಗೆ ನಿಂತಿದ್ದು ನಮ್ಮ ಸರ್ಕಾರ ಮಾತ್ರ. ನಿಮ್ಮ ಸಮಸ್ಯೆ ಏನೇ ಇದ್ರೂ ಸರ್ಕಾರದೊಂದಿಗೆ ಮಾತನಾಡಿ ಸಮಸ್ಯೆ ಬಗೆಹರಿಸಿಕೊಳ್ಳಿ. ಸಿಎಂ ಅನತಿಯಂತೆ ಮರುನೇಮಕ ಮಾಡಿಕೊಳ್ತಿದೇವೆ. ಮತ್ತೆ ಆ ರೀತಿಯ ತಪ್ಪು ಮಾಡಲು ಹೋಗಬೇಡಿ. ಮತ್ತೊಮ್ಮೆ ಮುಷ್ಕರ ಅದು ಇದು ಅಂತ ಮಾಡಿದ್ರೆ ನಾವ್ಯಾರೂ ಜೊತೆಗೆ ನಿಲ್ಲೋದಿಲ್ಲ ಎಂಬ ಎಚ್ಚರಿಕೆಯನ್ನ ನೀಡಿದ್ರು. ಮುಂದಿನ ತಿಂಗಳಿಂದ ಸರಯಾದ ಸಮಯಕ್ಕೆ ಸಂಬಳ ನೀಡುತ್ತೇವೆ. ಹಂತ-ಹಂತವಾಗಿ ಸಮಸ್ಯೆ ಬಗೆಹರಿಸುತ್ತೇನೆ. ಸದ್ಯಕ್ಕೆ ಸಾರಿಗೆ ಪ್ರಯಾಣ ದರ ಹೆಚ್ಚಳ ಮಾಡುವುದಿಲ್ಲ. ವೋಲ್ವೋ ಬಸ್‌ ಪ್ರಯಾಣ ದರ ಇಳಿಕೆ ಮಾಡಲಾಗಿದೆ ಎಂದು ಸಾರಿಗೆ ಸಚಿವ ಶ್ರೀರಾಮುಲು ಹೇಳಿದ್ದಾರೆ.

 

Share Post