Bengaluru

ತಲೆ ಕೆಡಿಸಿಕೊಳ್ಳದ ಬಿಬಿಎಂಪಿ; ಮೊಬೈಲ್‌ ಶೌಚಾಲಯ ವ್ಯವಸ್ಥೆ ಮಾಡಿದ ಪೊಲೀಸರು

ಬೆಂಗಳೂರು; ಗೊರಗುಂಟೆ ಪಾಳ್ಯದಲ್ಲಿ ಶೌಚಾಲಯ ಕಟ್ಟಿಸದೇ ನಿರ್ಲಕ್ಷ್ಯ ವಹಿಸಿದ್ದ ಬಿಬಿಎಂಪಿಗೆ, ಸ್ಥಳೀಯರ ಪೊಲೀಸರು ಸೆಡ್ಡು ಹೊಡೆದಿದ್ದಾರೆ. ಶೌಚಾಲಯವಿಲ್ಲದೆ ಸಾರ್ವಜನಿಕರು ಪರದಾಡುತ್ತಿದ್ದುದನ್ನು ಗಮಿಸಿದ ಪೊಲೀಸರು, ಶೌಚಾಲಯ ನಿರ್ಮಿಸಿಕೊಡುವಂತೆ ಬಿಬಿಎಂಪಿಗೆ ಹಲವು ಬಾರಿ ಮನವಿ ಮಾಡಿದ್ದರು. ಆದ್ರೆ ಯಾವುದೇ ಪ್ರಯೋಜನವಾಗಿಲ್ಲ. ಹೀಗಾಗಿ, ಪಿಎಸ್‌ಐ ಶಾಂತಪ್ಪ ಹಾಗೂ ಅವರ ತಂಡದವರು ತಮ್ಮದೇ ಖರ್ಚಿನಲ್ಲಿ ಮೊಬೈಲ್‌ ಶೌಚಾಲಯ ನಿರ್ಮಿಸಿದ್ದಾರೆ.

ಗೊರಗುಂಟೆಪಾಳ್ಯದ ಬಸ್ ತಂಗುದಾಣಕ್ಕೆ‌ ಹೊಂದಿಕೊಂಡ ಜಾಗದಲ್ಲಿ ಮೊಬೈಲ್‌ ಶೌಚಾಲಯ ವಾಹನ ನಿಲ್ಲಿಸಲಾಗಿದ್ದು, ಇಂದು ಬೆಳಗ್ಗೆ ಸಾರ್ವಜನಿಕರ‌ ಉಪಯೋಗಕ್ಕೆ‌ ಮುಕ್ತಗೊಳಿಸಲಾಯಿತು. ತೃತೀಯ ಲಿಂಗಿಯೊಬ್ಬರಿಂದ ಶೌಚಾಲಯ ಉದ್ಘಾಟನೆ‌ ಮಾಡಿಸಲಾಗಿದೆ. ತಮ್ಮನ್ನು ದೂರವಿಡಲು ಇಚ್ಛಿಸುವವರ‌ ಮಧ್ಯೆ, ಇಂಥ ಕೆಲಸಕ್ಕೆ ತಮ್ಮನ್ನು ಆಹ್ವಾನಿಸಿದ್ದಕ್ಕೆ ತೃತೀಯ ಲಿಂಗಿ ಭಾವುಕರಾಗಿ ಮಾತನಾಡಿದ್ದಾರೆ. ಉತ್ತರ ಕರ್ನಾಟಕದ ಜಿಲ್ಲೆಗಳು ಹಾಗೂ ಉತ್ತರ ಭಾರತದ ರಾಜ್ಯಗಳಿಗೆ ಗೊರಗುಂಟೆಪಾಳ್ಯ ಮಾರ್ಗವಾಗಿ ಬಸ್‌ಗಳು ಸಂಚರಿಸುತ್ತವೆ. ಇಂತ ಗೊರಗುಂಟೆಪಾಳ್ಯದಲ್ಲಿ ವ್ಯವಸ್ಥಿತ ಶೌಚಾಲಯ ಇಲ್ಲದಿದ್ದರಿಂದ, ಜನರ ಯಾತನೆ ಅನುಭವಿಸುತ್ತಿದ್ದರು. ಮಹಿಳೆಯರು, ವೃದ್ಧರು ಕಷ್ಟಪಡುತ್ತಿದ್ದರು. ಈ‌ ಸಮಸ್ಯೆ ನಿವಾರಿಸಲು ಹಲವು ಅಭಿಯಾನ ನಡೆಸಿದರೂ ಪ್ರಯೋಜನವಾಗಲಿಲ್ಲ ಎಂದರು.

Share Post