Bengaluru

ಬಹುಭಾಗ ಧರೆಗುರುಳಿದ ದೊಡ್ಡ ಆಲದ ಮರ; ಮಳೆಯಿಂದಾಗಿ ಹೆಚ್ಚಾದ ಭೀತಿ

ಬೆಂಗಳೂರು; ಬೆಂಗಳೂರು ಸಮೀಪದ ಪ್ರವಾಸಿ ತಾಣ ದೊಡ್ಡ ಆಲದ ಮರದ ಬಹುಭಾಗ ಧರೆಗುರುಳಿದೆ. ಭಾರಿ ಮಳೆಯಿಂದಾಗಿ ಬೇರು ಸಮೇತ ದೊಡ್ಡ ಆಲದ ಮರದ ಬೃಹತ್‌ ಭಾಗ ನೆಲಕ್ಕುರುಳಿದೆ. ಉಳಿದ ಭಾಗವೂ ಬೀಳುವ ಅಪಾಯವಿದೆ ಎಂದು ಹೇಳಲಾಗುತ್ತಿದೆ. 

 

ಬೆಂಗಳೂರಿನ ಕೇತೋಹಳ್ಳಿಯಲ್ಲಿರುವ ದೊಡ್ಡ ಆಲದ ಮರಕ್ಕೆ 400 ವರ್ಷಗಳ ಇತಿಹಾಸವಿದೆ. ಇದೀಗ ಇದರ ಪ್ರಮುಖ ಭಾಗವೊಂದು ನೆಲಕ್ಕುರುಳಿದೆ. ಹಾಗೆಯೇ ಮರದ ಇತರ ಭಾಗಗಳೂ ಅಪಾಯದ ಅಂಚಿನಲ್ಲಿದೆ. ಕಳೆದೊಂದು ವಾರದಿಂದ ಸತತವಾಗಿ ಸುರಿದ ಮಳೆಯಿಂದಾಗಿ ಮರದ ಭಾಗಗಳು ಧರೆಗುರುಳುತ್ತಿವೆ.‌

ಹುಲ್ಲುಹಾಸು ಮಾಡುವ ಉದ್ದೇಶದಿಂದ ಮರಗಳ ಬುಡದಲ್ಲಿನ ಮಣ್ಣು ತೆಗೆಯಲಾಗಿದೆ. ಈಗ ಬುಡದಲ್ಲಿ ಹೆಚ್ಚಿನ ಮಣ್ಣಿಲ್ಲದೇ ಮರವು ಬೀಳುವಂತಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಸದ್ಯ ಮರ ಬೀಳುವ ಸಂದರ್ಭದಲ್ಲಿ ಯಾರಿಗೂ ತೊಂದರೆಯಾಗಿಲ್ಲ. ಆದರೆ ಇನ್ನಷ್ಟು ಮರಗಳು ಅಪಾಯದ ಸ್ಥಿತಿಯಲ್ಲಿರುವುದು ಆತಂಕ ಸೃಷ್ಟಿಸಿದೆ.

ಸುಮಾರು ಮೂರು ಎಕರೆಯಷ್ಟು ವಿಶಾಲವಾಗಿ ದೊಡ್ಡಾಲದಮರ ಚಾಚಿಕೊಂಡಿದೆ. 400 ವರ್ಷದ ಇತಿಹಾಸ ಹೊಂದಿರುವ ಕಾರಣಕ್ಕೆ ಭಾರತದ ಅತ್ಯಂತ ನಾಲ್ಕನೇ ಪುರಾತನ ಆಲದ ಮರ ಎನ್ನುವ ಹೆಗ್ಗಳಿಕೆ ಇದರದ್ದಾಗಿದೆ.

Share Post