ಮಾರ್ಚ್ 3 ರಂದು ಬಿಬಿಎಂಪಿ ಬಜೆಟ್
ಬೆಂಗಳೂರು; ಬಿಬಿಎಂಪಿ ಆಯವ್ಯಯ ಮಂಡನೆಗೆ ಮುಹೂರ್ತ ಫಿಕ್ಸ್ ಆಗಿದೆ. ಇದೇ 24 ರಂದು ಪಾಲಿಕೆ ಅಧಿಕಾರಿಗಳಿಂದ ನಗರಭಿವೃದ್ಧಿ ಇಲಾಖೆಗೆ ಅಯುವ್ಯಯದ ಪಟ್ಟಿ ಸಲ್ಲಿಸಲಿದೆ. ಸಕಾ೯ರ ಮಾರ್ಚ 3 ರಂದು ಪಾಲಿಕೆ ಬಜೆಟ್ ಮಂಡಿಸಲು ಮುಹೂರ್ತ ನಿಗದಿ ಮಾಡಿದೆ. ಬಿಬಿಎಂಪಿಯ ಹಣಕಾಸು ವಿಭಾಗದ ವಿಶೇಷ ಆಯುಕ್ತ ಜಯರಾಮ್ ರಾಯಪುರ ಅವರು ಬಜೆಟ್ ಮಂಡನೆ ಮಾಡಲಿದ್ದಾರೆ. ಬಿಬಿಎಂಪಿ ಅದಮೇಲೆ ಅಧಿಕಾರಿಗಳಿಂದ ಮೂರನೇ ಬಾರಿ ಬಜೆಟ್ ಮಂಡನೆಯಾಗುತ್ತಿದೆ. ಈ ಬಾರಿಯೂ ಬಜೆಟ್ ವೀಕ್ಷಣೆಗೆ ಸಾರ್ವಜನಿಕರಿಗೆ ಅವಕಾಶವಿರುವುದಿಲ್ಲ. ಕಳೆದ ಬಾರಿಯಂತೆ ಈ ಬಾರಿಯೂ ಕೂಡ ಆನ್ ಲೈನ್ ಮುಖಾಂತರವೇ ಆಯವ್ಯಯ ಮಂಡನೆ ಮಾಡಲಾಗುವುದು. ಕಳೆದ ವರ್ಷದ ಕೆಲ ಯೋಜನೆಗಳ ಪುನರಾವರ್ತನೆಗೆ ಹಾಗೂ ಕಾಮಗಾರಿ ಪೂರ್ಣ ಮಾಡಲು ಬಿಬಿಎಂಪಿ ಚಿಂತನೆ ನಡೆಸಿದೆ. ಮಾರ್ಚ್ 03 ರಂದು ಬಜೆಟ್ ಮಂಡನೆಗೆ ಅನುಮತಿ ಕೋರಿ ಸಿಎಂಗೆ ಪ್ರಸ್ತಾವನೆ ನೀಡಲಾಗಿದ್ದು ಸಿಎಂ ಬೊಮ್ಮಾಯಿ ಒಪ್ಪಿಗೆ ಬೆನ್ನಲ್ಲೇ ಅಧಿಕೃತವಾಗಿ ದಿನಾಂಕವನ್ನ ಬಿಬಿಎಂಪಿ ಪ್ರಕಟಿಸಲಿದೆ
ಈ ಬಾರಿ ಬಿಬಿಎಂಪಿ ಬಜೆಟ್ ನಲ್ಲಿ ಎನ್ನೇಲ್ಲ ನಿರೀಕ್ಷೇ ಕಾಣಬಹುದು ಅಂತ ನೋಡುವದಾದರೆ.
– ಈ ಬಾರಿಯ ಬಜೆಟ್ ನಲ್ಲಿ ಬೆಂಗಳೂರಿಗೆ ಹೊಸ ಯೋಜನೆಗಳು ಹೆಚ್ಚಿರಲಿವೆ.
– ಬಿ ಖಾತೆಯ ಆಸ್ತಿಗಳಿಗೆ ಎ ಖಾತೆ ಹಂಚಿಕೆಯ ಕ್ರಮ.
– ಕಳೆದ ವರ್ಷದ ಕೆಲ ಯೋಜನೆಗಳ ಪುನರಾವರ್ತನೆಗೆ ಹಾಗೂ ಕಾಮಗಾರಿ ಪೂರ್ಣ ಮಾಡಲು ಬಿಬಿಎಂಪಿ ಚಿಂತನೆ.
– ಪಾಲಿಕೆಯಿಂದ ಹಲವು ಸಂಘ ಸಂಸ್ಥೆಗಳಿಗೆ ನೀಡಲಾಗುತ್ತಿದ್ದ ಅನುದಾನಗಳಲ್ಲಿ ಕಡಿತ.
– ರಾಜ್ಯ ಸರ್ಕಾರ ಕಸ ವಿಲೇವಾರಿಗೆ ಯಾವುದೇ ಅನುದಾನ ನೀಡದ ಹಿನ್ನೆಲೆ ಪ್ರಸಕ್ತ ಸಾಲಿನಲ್ಲಿ ಕಸ ವಿಲೇವಾರಿ ಸಂಪೂರ್ಣ ಜವಾಬ್ದಾರಿ ಪಾಲಿಕೆಯದ್ದಾಗಿರುವುದರಿಂದ ಈ ಬಜೆಟ್ ನಲ್ಲಿ ಅತಿ ಹೆಚ್ಚು ಅನುದಾನ ಕಸ ವಿಲೇವಾರಿಗೆ ನೀಡುವ ಸಾದ್ಯತೆ ಇದೆ.
– 2023-24ನೇ ಸಾಲಿನಲ್ಲಿ ಇಂದಿರಾ ಕ್ಯಾಂಟೀನ್ ಗೆ 50 ಕೋಟಿ ಅನುದಾನ.
– ಈ ಬಜೆಟ್ ನಲ್ಲಿ ರಸ್ತೆ ಅಭಿವೃದ್ಧಿ, ಶಿಕ್ಷಣ, ಆರೋಗ್ಯಕ್ಕೆ ಹೆಚ್ಚಿನ ಒತ್ತು.
– ಕೆರೆ, ರಾಜಕಾಲುವೆ, ಪಾರ್ಕ್ ಗಳ ಉನ್ನತ್ತೀಕರಣಕ್ಕೆ ಪಾಲಿಕೆಯಲ್ಲಿ ಒತ್ತು.
– ಪ್ರವಾಹ ಪರಿಸ್ಥಿತಿಯನ್ನು ನಿಯಂತ್ರಿಸಲು ಎಲ್ಲಾ ಕರೆಗಳಗೆ ಕ್ರಸ್ಟ್ ಗೇಟ್ ಅಳವಡಿಕೆ,
– ಬೆಂಗಳೂರು ನಗರದ ಸಂಚಾರ ದಟ್ಟಣೆಯನ್ನು ಕಡಿಮೆ ಮಾಡಲು ಪ್ರಮುಖ 75 ಜಂಕ್ಷನ್‌ಗಳನ್ನು ಅಭಿವೃದ್ಧಿ,
– ಟಿನ್ ಫ್ಯಾಕ್ಟರಿಯಿಂದ ಮೇಡಹಳ್ಳಿ ವರೆಗೆ 5 ಕೀ, ಮೀಟರ್ ಎಲಿವೇಟೆಡ್ ರಸ್ತೆ.
– ಪಾಲಿಕೆ ಅಸ್ತಿಗಳ ರಕ್ಷಣೆಗೆ ಒತ್ತು.
– ಬಿಬಿಎಂಪಿಯಿಂದ ಈ ಬಾರಿ 9 ಸಾವಿರ ಕೋಟಿ ಗಾತ್ರದ ಬಜೆಟ್ ಮಂಡನೆಯ ನಿರೀಕ್ಷೆ.
– ಕೆಂಪೇಗೌಡ ಜಯಂತಿ, ಕರಗ ಮಹೋತ್ಸವ, ಅಂಬೇಡ್ಕರ್ ಜಯಂತಿಗೂ ಕೋಟಿ ಕೋಟಿ ಅನುದಾನ.
– ಈ ಬಾರಿಯ ಬಜೆಟ್ ನಲ್ಲೂ ಪಾಲಿಕೆಯಿಂದ ಕುಡಿಯುವ ನೀರಿಗೆ ಹೆಚ್ಚಿನ ಆಧ್ಯತೆ.
– ಪಾಲಿಕೆ ವ್ಯಾಪ್ತಿಯ ಹೊಸ 110 ಹಳ್ಳಿಗಳಿಗೆ ಕಾವೇರಿ ನೀರು ಸರಬರಾಜಿಗೆ ಹೆಚ್ಚಿನ ಒತ್ತು.
– ಆರ್ಥಿಕ ಸಂಕಷ್ಟದಲ್ಲಿರುವ ಪಾಲಿಕೆಗೆ ಹೊಸ ಯೋಜನೆ ಘೋಷಣೆ ಸದ್ಯತೆ ಕಡಿಮೆ.
– ಮಹಿಳೆಯರಲ್ಲಿ ವಿಶ್ವಾಸ ಮೂಡಿಸುವ ನಿಟ್ಟಿನಲ್ಲಿ ನಿರ್ಭಯ ಯೋಜನೆಯಡಿ ಬೆಂಗಳೂರಿನಲ್ಲ “The Safe City Project”.
– ಮಾರುಕಟ್ಟೆಗಳು, ಬೃಹತ್ ವಾಣಿಜ್ಯ ಮಳಿಗೆಗಳು ಮತ್ತಿತರ ಜನನಿಬಿಡ ಪ್ರದೇಶಗಳಲ್ಲಿ ಮಹಿಳೆಯರ ಅನುಕೂಲಕ್ಕಾಗಿ 250 ಸುಸಜ್ಜಿತ “She Toilet” ನಿರ್ಮಾಣ.
– ಈ ವರ್ಷ 5,000 ಕೋಟಿ ಆಸ್ತಿ ತೆರಿಗೆಯಿಂದ ಆದಾಯ ನಿರೀಕ್ಷೆ.
– ಉಳಿದಂತೆ ಜಾಹೀರಾತು, ಖಾತಾ ವರ್ಗಾವಣೆ ಶುಲ್ಕ ಸೇರಿದಂತೆ ಇತರೆ ಮೂಲಗಳಿಂದ 2,000 ಕೋಟಿ ಆದಾಯ.
– ಒಟ್ಟು ಪಾಲಿಕೆಯಿಂದ ಪ್ರಸಕ್ತ ಸಾಲಿನಲ್ಲಿ 7,000 ಕೋಟಿ ಆದಾಯ ಸಂಗ್ರಹ.
– ರಾಜ್ಯ ಸರ್ಕಾರದಿಂದ 3 ರಿಂದ 4 ಸಾವಿರ ಕೋಟಿ ಅನುದಾನದ ನಿರೀಕ್ಷೆಯಲ್ಲಿ ಬಿಬಿಎಂಪಿ.
– ಈ ಬಾರಿಯ ಬಜೆಟ್ ನಲ್ಲಿ ಸಿಲಿಕಾನ್ ಸಿಟಿ ಜನರಿಗೆ ಆಸ್ತಿ ತೆರಿಗೆ ಹೊರೆ ಇಲ್ಲ.
– ಪಾಲಿಕೆ ಚುನಾವಣೆ ದೃಷ್ಟಿಯಿಂದ ಆಸ್ತಿ ತೆರಿಗೆ ಏರಿಕೆ ಮಾಡದಂತೆ ಸಿಎಂ ಸೂಚನೆ.