Bengaluru

ಧ್ವನಿವರ್ಧಕ ಬಳಕೆ ವಿಚಾರ; 300 ಮಸೀದಿಗೆ ಪೊಲೀಸರಿಂದ ನೋಟಿಸ್‌

ಬೆಂಗಳೂರು: ಧ್ವನಿವರ್ಧಕ ಬಳಿಕ ಆಝಾನ್‌ ಕೂಗುವ ವಿಚಾರಕ್ಕೆ ಸಂಬಂಧಿಸಿದಂತೆ ಬೆಂಗಳೂರು ಪೊಲೀಸರು 300 ಮಸೀದಿಗಳಿಗೆ ನೋಟಿಸ್‌ ಜಾರಿ ಮಾಡಿದ್ದಾರೆ. ಹೆಚ್ಚು ಡಿಸಿಬಲ್‌ ಶಬ್ದದ ಮೈಕ್‌ಗಳನ್ನು ಬಳಸಲಾಗುತ್ತಿರುವ ಕಾರಣ ಈ ನೋಟಿಸ್‌ ನೀಡಲಾಗಿದೆ.

ಕೋರ್ಟ್‌ ಆದೇಶದ ಹಿನ್ನೆಲೆಯಲ್ಲಿ ಕಡಿಮೆ ಶಬ್ದ ಬರುವ ಮೈಕ್‌ಗಳನ್ನು ಬಳಸಬೇಕೆಂದು ಸರ್ಕಾರ ಆದೇಶ ಮಾಡಿದೆ. ಆದರೂ ಸರ್ಕಾರದ ಆದೇಶ ಉಲ್ಲಂಘನೆ ಮಾಡಿದ ಹಿನ್ನೆಲೆಯಲ್ಲಿ ಪೊಲೀಸರು ನೋಟಿಸ್‌ ಕೊಟ್ಟಿದ್ದಾರೆ. ನೋಟಿಸ್‌ ಕೊಟ್ಟ ನಂತರ ಮಸೀದಿಗಳಲ್ಲಿ ಶಬ್ದದ ಪ್ರಮಾಣ ಕಡಿಮೆಯಾಗಿದೆ ಎಂದು ತಿಳಿದುಬಂದಿದೆ.

 

ಕೆಲ ದಿನಗಳ ಹಿಂದೆ ದೇವಸ್ಥಾನಗಳಿಗೂ ಕೂಡಾ ಪೊಲೀಸರು ನೋಟಿಸ್‌ ನೀಡಿದ್ದರು.

 

Share Post